ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರಿಂದ ಹೈರಾಣಾಗಿ ಹೋಗಿರುವ ಜನರು, ಮತ್ತೆ ಸೌಧೆಒಲೆ ಊದುವುದು ಉತ್ತಮ ಅನ್ನೋ ಸ್ಥಿತಿಗೆ ಬಂದಿದ್ದಾರೆ. ಇಂದಿನಿಂದ ವಾಣಿಜ್ಯ ಗ್ಯಾಸ್ ಬೆಲೆ ಬರೋಬ್ಬರಿ 250 ರೂಪಾಯಿ ಏರಿಕೆಯಾಗಿದೆ.
ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ 19 ಕೆಜಿಯ ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ 250 ರೂಪಾಯಿ ಏರಿಕೆ ಮಾಡಿದೆ. ದೆಹಲಿಯಲ್ಲಿ 2,253 ರೂಪಾಯಿ, ಕೋಲ್ಕತ್ತಾದಲ್ಲಿ 2,351, ಮುಂಬೈನಲ್ಲಿ 2,205 ಹಾಗೂ ಚೆನ್ನೈನಲ್ಲಿ 2,406 ರೂಪಾಯಿ ಆಗಿದೆ.