ಜನಪದ ಬರಿ ಹಾಡಲ್ಲ ಕೌಶಲ್ಯದ ಪ್ರತಿರೂಪ: ಲಕ್ಷ್ಮಿರಾಮ್

300

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ಮಹಿಳಾ ಜಾನಪದ ಸಮ್ಮೇಳನದಲ್ಲಿ ಸಂಸ್ಕೃತಿಕ ಚಿಂತಕ ಲಕ್ಷ್ಮಿರಾಮ್ ಅವರು ಉಪನ್ಯಾಸ ನೀಡಿದರು. ‘ಜಾನಪದ ಸಾಹಿತ್ಯದಲ್ಲಿ ಮಹಿಳೆ’ ಅನ್ನೋ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಜಾನಪದ ಬರಿ ಹಾಡಲ್ಲ ಬರಿ ಕುಣಿತವೂ ಅಲ್ಲ. ಅಲ್ಲಿ ಕಾಯಕದ ಪ್ರತಿಬಿಂಬವಿದೆ. ನೋವು ನಲಿವು ಹೊರಹಾಕಲು ಕಲೆಗಳು ಬೆಳೆದು ಇಂದು ಹೆಮ್ಮರವಾಗಿ ನಾಡಿನ ಗೌರವ ಹೆಚ್ಛಿಸಿವೆ ಎಂದರು. ಅವುಗಳನ್ನು ಸಾಧ್ಯವಾದ ಮಟ್ಟಿಗೆ ಮೂಲ ಸ್ವರೂಪದಲ್ಲೇ ಕಲಿಯಬೇಕು ಮತ್ತು ಕಲಿಸಬೇಕು ಎಂದರು.

ವೇದಿಕೆಯಲ್ಲಿ ಪಲ್ಲವಿ, ಸಿ.ಟಿ ರವಿ, ರವಿ ದಳವಾಯಿ, ಸವಿತಾ ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!