ಕೆಮಿಕಲ್ ಗೋಡೌನ್ ನಲ್ಲಿ ಬೆಂಕಿ ಅನಾಹುತ

407

ಕೋಲ್ಕತ್ತಾ: ಹೌರಾ ಬಿಡ್ಜ್ ಬಳಿಯ ಕೆಮಿಕಲ್ ಗೋಡೌನ್ ನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಕೋಲ್ಕತ್ತಾದ ಜಗ್ನಾತ್ ಘಾಟ ಬಳಿಯ ಇರುವ ಕೆಮಿಕಲ್ ಗೋಡೌನ್ ನಲ್ಲಿ ಈ ಒಂದು ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.

ಅದೃಷ್ಟವಶಾತ ಈ ವೇಳೆ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ಈ ಒಂದು ಘಟನೆಯಿಂದ ಸುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ನಂದಿಸಲು 20 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!