ವಲಸೆ ಕಾರ್ಮಿಕರಿಂದ ಟಿಕೆಟ್: ರಾಜ್ಯ ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

325

ಬೆಂಗಳೂರು: ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರುವ ಕಾರ್ಮಿಕರನ್ನ ಮರಳಿ ಅವರ ಊರಿಗೆ ತಲುಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡ್ತಿದೆ. ಸ್ಥಳೀಯ ಆಡಳಿತಾಧಿಕಾರಿಗಳಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ಗಳ ಮೂಲಕ ವಸಲೆ ಕಾರ್ಮಿಕರಿಗೆ ಅವರವರ ಊರುಗಳಿಗೆ ತಲುಪಿಸಲಾಗ್ತಿದೆ.

ಹೀಗೆ ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿರುವ ರಾಜ್ಯ ಸರ್ಕಾರ, ಪ್ರಯಾಣಿಕರಿಂದ ಟಿಕೆಟ್ ದರ ಪಡೆಯುತ್ತಿದೆ. ಅದು ಅಲ್ದೇ, ಮೊದಲಿದ್ದ ಟಿಕೆಟ್ ದರಕ್ಕಿಂತ ಎರಡು, ಮೂರು ಪಟ್ಟು ಹೆಚ್ಚಿಗೆ ಅನ್ನೋ ಆರೋಪ ಸಹ ಕೇಳಿ ಬರ್ತಿದೆ. ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ವಲಸೆ ಕಾರ್ಮಿಕರಿಂದ ಟಿಕೆಟ್ ಹಣ ಪಡೆಯುವುದನ್ನ ನಿಲ್ಲಿಸದಿದ್ದರೆ ನಿಮ್ಮ ವಿರುದ್ಧ ಹೋರಾಟಕ್ಕೆ ಕರೆಯನ್ನ ಕೊಡಬೇಕಾಗುತ್ತೆ ಅನ್ನೋ ಎಚ್ಚರಿಕೆ ನೀಡಿದ್ದಾರೆ.

ಕೆಎಸ್ಆರ್ ಟಿಸಿ, ಖಾಸಗಿ ಬಸ್ ಮಾಲೀಕರು ಸಾವಿರಾರು ರೂಪಾಯಿ ಟಿಕೆಟ್ ದರ ಸೂಲಿಗೆ ಮಾಡ್ತಿದ್ದಾರೆ. ತಿಂಗಳುಗಳಿಂದ ಕೆಲಸವಿಲ್ಲದ ಅವರು ಎಲ್ಲಿಂದ ಹಣ ಕೊಡಬೇಕು. ಲಾಕ್ ಡೌನ್ ನಾವು ಮಾಡಿದ್ದು. ದುಬೈ, ಚೀನಾ ಸೇರಿ ವಿದೇಶದಿಂದ ಕರೆದುಕೊಂಡು ಬರಲು ಕೇಂದ್ರ ಸರ್ಕಾರ ವಿಮಾನ ಕಳಿಸಿದೆ. ಆದ್ರೆ, ಇವರಿಗೆ ಕೂಲಿ ಇಲ್ಲ. ಊಟವಿಲ್ಲ. ಇಂತವರಿಂದ ಹಣ ಪಡೆಯುವುದು ನಿಲ್ಲಿಸಿ. ಇದನ್ನ ಸರ್ಕಾರವೇ ಭರಿಸಬೇಕು. ಸರ್ಕಾರಕ್ಕೆ ಬಡತನವಿದ್ಯಾ ಎಂದು ಕಾರವಾಗಿ ಪ್ರಶ್ನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!