ಗುಜರಾತ್ ಚುನಾವಣೆ: 900ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ

229

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆದಿದೆ. ಈಗ ಚುನಾವಣಾ ಆಯೋಗ ವಿವಿಧ ದರ್ಜೆಯ 900ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇಸಿಐ ಮಾರ್ಗಸೂಚಿಗಳು ಹಾಗೂ ಸೂಚನೆಯ ಮೇರೆಗೆ ವರ್ಗಾವಣೆ ಮಾಡಲಾಗಿದೆ.

ಅಕ್ಟೋಬರ್ 21ರಂದು ಗುಜರಾತ್ ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಅಧಿಕಾರಿಗಳ ವರ್ಗಾವಣೆಗೆ ನಿಗದಿತ ಸಮಯ ಹಾಗೂ ನಂತರದ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಚುನಾವಣೆ ದಿನಾಂಕವನ್ನು ಇನ್ನು ಆಯೋಗ ಘೋಷಣೆ ಮಾಡಿಲ್ಲ. ಆದರೆ, ಈಗಲೇ ರಾಜಕೀಯ ಪಕ್ಷಗಳು ಪ್ರಚಾರ ನಡೆಸಿವೆ. ಆಪ್ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಬಿಜೆಪಿ ವಿರುದ್ಧ ಸಧ್ಯ ಫೈಟ್ ನಡೆದಿದೆ.




Leave a Reply

Your email address will not be published. Required fields are marked *

error: Content is protected !!