ಅಬ್ಬರಿಸಿದ ಟೀಂ ಇಂಡಿಯಾ ಹುಡುಗರು

316

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ಟೂರ್ನಿಯ 23ನೇ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಕ್ರಿಕೆಟ್ ಲೋಕದ ಯುವ ಟೀಂ ನೆದರ್ಲ್ಯಾಂಡ್ ವಿರುದ್ಧ ಬಲಿಷ್ಠ ಭಾರತದ ಪಡೆ ಅಬ್ಬರಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ಲೆಕ್ಕಾಚಾರದಂತೆ ಆಟವಾಡಲಾಯಿತು.

ಕೆ.ಎಲ್ ರಾಹುಲ್ 9 ರನ್ ಗಳಿಸಿ ಔಟ್ ಆದರು. ಆದರೆ, ನಾಯಕ ಶರ್ಮಾ 3 ಸಿಕ್ಸ್, 4 ಫೋರ್ ನೊಂದಿಗೆ 53 ರನ್ ಗಳಿಸಿ ಟೀಂಗೆ ಆಸರೆಯಾದರು. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕಿಂಗ್ ಕೊಹ್ಲಿ ಅಜೇಯ 62 ಹಾಗೂ ಯುವ ಸ್ಫೋಟಕ ಬ್ಯಾಟ್ಸಮನ್ ಸೂರ್ಯಕುಮಾರ್ ಅಜೇಯ 51 ರನ್ ಗಳಿಸಿದರು. ಇದರೊಂದಿಗೆ 2 ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿತು. ನೆದರ್ಲ್ಯಾಂಡ್ ಪರ ಪ್ರೀಡ್ ಹಾಗೂ ಪೌಲ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!