ಇಂದು ಮತ್ತೆ 100 ತಹಶೀಲ್ದಾರ್ ಗಳ ವರ್ಗಾವಣೆ

189

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶುಕ್ರವಾರ 46 ತಹಶೀಲ್ದಾರ್ ಗ್ರೇಡ್-1 ಹಾಗೂ ಗ್ರೇಡ್-2 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಬರೋಬ್ಬರಿ 100 ತಹಶೀಲ್ದಾರ್ ಗಳ ವರ್ಗಾವಣೆಯಾಗಿದೆ. ಈ ಮೂಲಕ ಒಂದೇ ದಿನದ ಅಂತರದಲ್ಲಿ 146 ತಹಶೀಲ್ದಾರ್ ಗಳ ವರ್ಗಾವಣೆಯಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಆದರೆ, ಹೊಸ ಸರ್ಕಾರ ಬಂದ ಬಳಿಕ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅನ್ನೋದು ಸಹಜವಾಗಿದೆ. ಹೀಗಾಗಿ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ ಹಂತದಿಂದ ಹಿಡಿದು ಬೇರೆ ಬೇರೆ ಇಲಾಖೆಯ ವಿವಿಧ ವರ್ಗದ ಅಧಿಕಾರಿಗಳ ವರ್ಗಾವಣೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!