ರಾಷ್ಟ್ರೀಯ ವಿಜ್ಞಾನ ದಿನಾಚರಣೆ

503

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋಕ್ಲಬ್ ಅಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಶಾಲಾ ಸ್ವಚ್ಛತೆ ಪರಿಸರ ಸಂರಕ್ಷಣೆಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾದ ತಾಲೂಕ ವೈದ್ಯಾಧಿಕಾರಿ ಎಸ್.ಡಿ ಕುಲಕರ್ಣಿ , ಸೈಕಿಯಾಟಿಸ್ಟ್ ಸೋಶಿಯಲ್ ವರ್ಕರ್ ಆಗಿರುವ ಭಾಗ್ಯಶ್ರೀ ರಾಮಣ್ಣವರ್ ಅವರು ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸದೃಢ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.

ಇದೆ ವೇಳೆ ಶಾಲೆಯ ವಿಜ್ಞಾನ ಶಿಕ್ಷಕಿ ಗೀತಾ ಅಥಣಿ, ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಕೆರಳಿಸಲು ಹಲವಾರು ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಿ.ಎಸ್ ನರಗೋದಿ, ಶಾಲೆಯ ಮುಖ್ಯಗುರುಗಳಾದ ಶಿವಾನಂದ ಶಹಪುರ್, ಶಿಕ್ಷಕಿ ಗೀತಾ ಅಥಣಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶರಣಬಸವ ಲಂಗೋಟಿ, ದೈಹಿಕ ಶಿಕ್ಷಕ ಆರ್.ಆರ್ ನಿಂಬಾಳ್ಕರ್, ಶಾಲೆಯ ಹಿರಿಯ ಶಿಕ್ಷಕ ಶಿವಾನಂದ ಅವಟಿ, ಶೋಭಾ ಕೊಳೇಕರ, ಎಸ್.ಎಸ್ ಕೇಸರಿ ವಿ.ಕೆ ಕುಲಕರ್ಣಿ, ಸಂಗೀತಾ.ಕೆ, ಟಿ. ಎಸ್. ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!