ನಿನ್ನೆ 6 ಇಂದು 4 ಜಿಲ್ಲೆಗಳು ಅನ್ ಲಾಕ್

271

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅನ್ ಲಾಕ್ 2.0 ಹಂತದಲ್ಲಿ ಮೊದಲಿಗೆ 16 ಜಿಲ್ಲೆಗಳನ್ನ ಅನ್ ಲಾಕ್ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಘೋಷಿಸಿದರು. ನಂತರ ಧಾರವಾಡ ಅನ್ ಲಾಕ್ ಮಾಡಲಾಯ್ತು. ಇದಾದ ಮೇಲೆ ಸೋಮವಾರ 6 ಜಿಲ್ಲೆಗಳನ್ನ ಅನ್ ಲಾಕ್ ಮಾಡಲಾಗಿದೆ.

ಇಂದು(ಮಂಗಳವಾರ) ಮತ್ತೆ 4 ಜಿಲ್ಲೆಗಳನ್ನ ಅನ್ ಲಾಕ್ ಮಾಡುವ ಮೂಲಕ 28 ಜಿಲ್ಲೆಗಳು ಅನ್ ಆಗಿವೆ. ಇದರೊಂದಿಗೆ ಕರ್ನಾಟಕ ಶೇಕಡ 80-90 ರಷ್ಟು ಜಿಲ್ಲೆಗಳಲ್ಲಿ ಸಡಿಲಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಹಾಗೂ ಚಾಮರಾಜನಗರ ಜಿಲ್ಲೆಗಳನ್ನ ಅನ್ ಲಾಕ್ ಮಾಡಲಾಗಿದೆ.

ಈಗಾಗ್ಲೇ ಅನ್ ಲಾಕ್ ಮಾಡಿರುವ ಜಿಲ್ಲೆಗಳಿಗೆ ಅನ್ವಯಿಸುವಂತೆ ಕರೋನಾ ಮಾರ್ಗಸೂಚಿಗಳು ಈ ಜಿಲ್ಲೆಗಳಿಗೂ ಅನ್ವಯಿಸುತ್ತೆ. ಜುಲೈ 5ರ ನಂತರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇನ್ನಷ್ಟು ಸಡಿಲಿಕೆ ಸಿಗಬಹುದು.




Leave a Reply

Your email address will not be published. Required fields are marked *

error: Content is protected !!