Search

ಇಳಕಲ್ ಸೀರೆ, ಗುಳೇದಗುಡ್ಡ ಕಣ ಹೊತ್ತು ಬಂದ ನೋಟ್ ಬುಕ್ಸ್…

161

ಪ್ರಜಾಸ್ತ್ರ ಸುದ್ದಿ

ಗದಗ: ಇಂದಿನ ಮಾರುಕಟ್ಟೆ ಸದಾ ಹೊಸತನ ಬೇಡುತ್ತೆ. ಹೀಗಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಥವ ವಿಭಿನ್ನ ಶೈಲಿಯ ಉತ್ಪನ್ನಗಳ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತೆ. ಇದೆ ರೀತಿ ನಮ್ಮ ರಾಜ್ಯದ ಗದಗ ಜಿಲ್ಲೆಯ ಗುಳೇದಗುಡ್ಡದ ಖ್ಯಾತ ಸೀರೆ ಕಣದಿಂದ ನೋಟ್ ಬುಕ್ ಕವರ್ ರೆಡಿ ಮಾಡಲಾಗಿದೆ.

ನೋಟು ಬುಕ್ ಗಳ ಮೇಲೆ ಸಾಮಾನ್ಯವಾಗಿ ಸಿನಿಮಾ, ಕೀಡಾ ಸ್ಟಾರ್ ಗಳ ಫೋಟೋ, ಪ್ರಾಣಿ, ಪಕ್ಷಿಗಳ ಫೋಟೋ ಇರುತ್ತವೆ. ಈಗ ನಮ್ಮ ಖ್ಯಾತ ಇಳಕಲ್ ಸೀರೆ, ಗುಳೇದಗುಡ್ಡ ಕಣದ ಹೊದಿಕೆಯಿಂದ ಮಾಡಿರುವ ನೋಟ್ ಬುಕ್ ವೈರಲ್ ಆಗಿವೆ. ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ(ಗೋಯಲ್) ಅವರು ತಮ್ಮ ಟ್ವೀಟರ್ ನಲ್ಲಿ ನೂತನ ಬುಕ್ ಗಳನ್ನು ಹಂಚಿಕೊಂಡಿದ್ದಾರೆ.

ಇಳಕಲ್ ಸೀರೆ, ಗುಳೇದಗುಡ್ಡ ಕಣದ ಹೊದಿಕೆ ಹೊಂದಿರುವ ನೋಟ್ ಬುಕ್ ಗಳು ಸಭೆ, ಸಮಾರಂಭಗಳಿಗೆ ನೀಡಲು ಯೋಗ್ಯವಾಗಿವೆ. ಇಲ್ಲಿನ ನೇಕಾರರೊಂದಿಗೆ ನಾನು ಸಂಪರ್ಕದಲ್ಲಿದ್ದು, ಇದು ನೇಕಾರರ ಗೆಲುವು, ನಮ್ಮ ಗೆಲುವು ಎಂದು ಹೇಳುವ ಮೂಲಕ, ನಮ್ಮ ದೇಸಿ ಪರಂಪರೆ ಹಾಗೂ ನೇಕಾರರಿಗೆ ಸಹಾಯ ಮಾಡುವ ಕೆಲಸವಾಗಿದೆ. 300-400 ರೂಪಾಯಿ ಇದಕ್ಕೆ ಖರ್ಚಾಗಲಿದೆ.




Leave a Reply

Your email address will not be published. Required fields are marked *

error: Content is protected !!