ಎಲ್ಲ ಮಾದರಿ ಕ್ರಿಕೆಟ್ ಗೆ ಪಾರ್ಥಿವ ಗುಡ್ ಬೈ

316

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂನ ಬ್ಯಾಟ್ಸಮನ್, ವಿಕೆಟ್ ಕೀಪರ್  ಪಾರ್ಥಿವ ಪಟೇಲ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 35 ವರ್ಷದ ಪಾರ್ಥಿವ 15 ವರ್ಷಗಳ ತಮ್ಮ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಜನವರಿ 4, 2002ರಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಇದುವರೆಗೂ 38 ಪಂದ್ಯ 736 ರನ್, 95 ರನ್ ಗರಿಷ್ಟ ಸ್ಕೋರ್ ಗಳಿಸಿದ್ದಾರೆ. ಆಗಸ್ಟ್ 8, 2002ರಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಟೆಸ್ಟ್ ಪಂದ್ಯಕ್ಕೆ ಆಗಮನ ಮಾಡಿದ್ರು. 25 ಟೆಸ್ಟ್ ಪಂದ್ಯಗಳಲ್ಲಿ 934 ರನ್ ಗಳಿಸಿದ್ದಾರೆ. 71 ಗರಿಷ್ಟ ರನ್ ಆಗಿದೆ.

ಜೂನ್ 4, 2011ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಟಿ-20 ಪಂದ್ಯವಾಡಿದ್ರು. ಆಡಿರೋದು ಕೇವಲ 2 ಪಂದ್ಯ, ಗಳಿಸಿದ್ದು 36 ರನ್. ಏಕದಿನದಲ್ಲಿ 4 ಅರ್ಧಶತಕ, ಟೆಸ್ಟ್ ನಲ್ಲಿ 6 ಅರ್ಧ ಶತಕ ಗಳಿಸಿದ್ದಾರೆ. 2012ರಿಂದ ಟೀಂ ಇಂಡಿಯಾದಲ್ಲಿ ಪಾರ್ಥಿವ ಪಟೇಲಗೆ ಚಾನ್ಸ್ ಸಿಗ್ಲೇ ಇಲ್ಲ.




Leave a Reply

Your email address will not be published. Required fields are marked *

error: Content is protected !!