ಪ್ರಜಾಸ್ತ್ರ ಕ್ರೀಡಾ ಸುದ್ದಿ
ಇಂಡಿಯನ್ ಕ್ರಿಕೆಟ್ ಟೀಂನಲ್ಲಿ ಇಂದು ಇಬ್ಬರು ನಿವೃತ್ತಿ ಘೋಷಿಸಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಬಳಿಕ, ಆಪ್ತ, ಧೋನಿ ಬಳಗದಲ್ಲಿ ಗುರುತಿಸಿಕೊಂಡಿರುವ ಸುರೇಶ ರೈನಾ ಸಹ ನಿವೃತ್ತಿ ಘೋಷಿಸಿದ್ದಾರೆ.
ಧೋನಿಗೆ ಧನ್ಯವಾದ ಹೇಳಿರುವ ರೈನಾ, ನಿನ್ನೊಂದಿಗೆ ನಾನು ಜೊತೆಯಾಗ್ತಿದ್ದೇನೆ ಎಂದಿದ್ದು, ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಸುರೇಶ ರೈನಾ ಧೋನಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡ್ತಿದ್ದಾರೆ.