ಪಿಂಕ್ ವಾಟ್ಸಪ್ ಅನ್ನೋದು ವೈರಸ್.. ಓಪನ್ ಮಾಡಿದರೆ ನಿಮ್ಮ ಎಲ್ಲ ದಾಖಲೆ ಸೋರಿಕೆ!

344

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಶುಕ್ರವಾರ ಸಂಜೆಯಿಂದ ಪಿಂಕ್ ವಾಟ್ಸಪ್ ಅನ್ನೋದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಕ್ಷಣ ಮಾತ್ರದಲ್ಲಿ ದೇಶ್ಯಾದ್ಯಾಂತ ಹಬ್ಬಿದೆ. ಲಿಂಕ್ ಓಪನ್ ಮಾಡಿದ ಬಳಿಕ ವಾಟ್ಸಪ್ ಬಳಕೆದಾರರಿಗೆ ಗೊತ್ತಿಲ್ಲದೆ ಸುಮಾರು 10 ಗ್ರೂಪ್ ಗಳಿಗೆ 100 ಜನರಿಗೆ ತನ್ನಿಂದ ತಾನೆ ಫಾರ್ವರ್ಡ್ ಆಗುತ್ತಿದೆ. ಸೈಬರ್ ಸೆಕ್ಯೂರ್ಟಿ ಎಕ್ಸ್ ಪರ್ಟ್ ಪ್ರಕಾರ ಇದೊಂದು ವೈರಸ್ ಲಿಂಕ್ ಆಗಿದೆ.

ಪಿಂಕ್ ವಾಟ್ಸಪ್ ಹೆಸರಿನ ಲಿಂಕ್ ಮೂಲಕ ವಾಟ್ಸಪ್ ಬಳಕೆದಾರರು ಮೊಬೈಲ್ ನಲ್ಲಿ ಸಂಪೂರ್ಣ ಮಾಹಿತಿ ಲೀಕ್ ಆಗಲಿದೆಯಂತೆ. ಫೋನ್ ನಂಬರ್, ವೈಯಕ್ತಿ ವಿವರ, ಫೋಟೋ, ವಿಡಿಯೋ, ಫೋನ್ ನಂಬರ್ಸ್, ಸೆಲ್ ಫೋನ್ ಮಾಹಿತಿ ಸೇರಿದಂತೆ ಎಲ್ಲ ಲೀಕ್ ಆಗುವ ಮೂಲಕ ಸೈಬರ್ ಕಳ್ಳರ ಪಾಲಾಗಲಿದೆ ಎಂದು ತಿಳಿದು ಬಂದಿದೆ.

ಈ ಲಿಂಕ್ ವಾಟ್ಸಪ್ ಕಂಪನಿಯಿಂದ ಬಂದ ಅಧಿಕೃತ ಮಾಹಿತಿ ಅಲ್ಲ. ಹೀಗಾಗಿ ಯಾರು ಯಾವುದೇ ಕಾರಣಕ್ಕೂ ಇದನ್ನು ಓಪನ್ ಮಾಡಬೇಡಿ. ನೀವು ಒಮ್ಮೆ ಫೋನ್ ಮಾಡಿದ್ರೆ ಸಾಕು, ನಿಮ್ಮಿಂದ ತನ್ನಿಂದ ತಾನೆ ಬೇರೆ ಫಾರ್ವರ್ಡ್ ಆಗಿ, ಅವರಿಂದ ಮತ್ತೊಬ್ಬರ ಫಾರ್ವಡ್ ಆಗುತ್ತಿದೆ. ಅಲ್ಲಿಗೆ ಎಲ್ಲರ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತೆ ಎಚ್ಚರಿಕೆ. ಈ ಬಗ್ಗೆ ಎಲ್ಲರಿಗೂ ತಿಳಿಸಿ.




Leave a Reply

Your email address will not be published. Required fields are marked *

error: Content is protected !!