ರಫೇಲ್ ಹಗರಣ ಮತ್ತು ಪ್ರಧಾನಿ ಮೋದಿ ಮೌನ..

761

ಉಪನ್ಯಾಸಕರು ಹಾಗೂ ಅಂಕಣಕಾರರಾದ ಡಾ.ಜೆ.ಎಸ್ ಪಾಟೀಲ ಅವರು ಬರೆದ ವಿಶೇಷ ಲೇಖನ..

ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣ ಮತ್ತೆ ಸದ್ದು ಮಾಡುತ್ತಿದೆ. ಸುಶೇನ್ ಗುಪ್ತಾ ಅವರು ಡಸಾಲ್ಟ್ ಗೆ ತಲುಪಿಸಿದ ಭಾರತೀಯ ಸಮಾಲೋಚನಾ ತಂಡದ ಬಗೆಗಿನ ವರ್ಗೀಕೃತ ದಾಖಲೆಗಳು ಈಗ ದೊಡ್ಡ ತಲ್ಲಣವನ್ನೇ ಸ್ರಷ್ಠಿಸಿವೆ. ಆ ಕುರಿತು ಫ್ರೆಂಚ್ ವರದಿ ಏನು ಹೇಳುತ್ತದೆ ಎನ್ನುವುದರ ಬಗ್ಗೆ ಈಗ ಎಲ್ಲರ ಕುತೂಹಲ ನೆಟ್ಟಿದೆ. ಈ ಒಪ್ಪಂದದಲ್ಲಿ ಮಧ್ಯವರ್ತಿಗಳು ರಫೇಲ್ ಖರೀದಿ ಬೆಲೆಯನ್ನು ಲೆಕ್ಕಹಾಕಲು ಭಾರತೀಯ ತಂಡ ರಚಿಸಿದ ಎಕ್ಸೆಲ್ ಶೀಟ್ ಅನ್ನು ಸಹ ಪಡೆದಿದ್ದರು ಎನ್ನುತ್ತವೆ ಫ್ರೆಂಚ್ ವರದಿಗಳು.

ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಚಾಪರ್ ಒಪ್ಪಂದದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹಾಕಿದ ಚಾರ್ಜ್ ಶೀಟ್ ಪ್ರಕಾರ ಶಸ್ತ್ರಾಸ್ತ್ರ ವ್ಯಾಪಾರಿ ಸುಶೇನ್ ಗುಪ್ತಾ ಅವರು € 7.87 ಬಿಲಿಯನ್ ರಫೇಲ್ ಒಪ್ಪಂದದಲ್ಲಿ ಮಾನದಂಡದ ಬೆಲೆಯ ಬಗ್ಗೆ ಮಾತುಕತೆ ನಡೆದಾಗ ಭಾರತೀಯ ಸಮಾಲೋಚನಾ ತಂಡದಲ್ಲಿ ಡಸಾಲ್ಟ್ ಏವಿಯೇಷನ್‌ಗೆ ವರ್ಗೀಕೃತ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ವರದಿ ಮಾಡದೆ. ಮೀಡಿಯಾಪಾರ್ಟ್ ಒದಗಿಸಿದ ಮಾಹಿತಿಯ ಪ್ರಕಾರ, 2016 ರ ಮೇ 26 ರಲ್ಲಿ 36 ಜೆಟ್ ವಿಮಾನಗಳ ಖರೀದಿ ಒಪ್ಪಂದದ ಇತರ ರಕ್ಷಣಾ ವ್ಯವಹಾರಗಳಲ್ಲಿ ಮಾಡಿದ ಅಂತರ-ಸರ್ಕಾರಿ ಒಪ್ಪಂದ (ಐಜಿಎ)ದ ಕುರಿತು ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ಮಾಹಿತಿ ಇಲ್ಲ ಎನ್ನಲಾಗಿದೆ. ಗುಪ್ತಾ ವಿರುದ್ಧ ಮೇ 20, 2019 ರ ಇಡಿ ಸಲ್ಲಿಸಿದ ಅಧಿಕೃತ ಚಾರ್ಜ್‌ಶೀಟ್‌ನಲ್ಲಿ, ರಕ್ಷಣಾ ಸಚಿವಾಲಯದಲ್ಲಿರಬೇಕಾದ ಸೂಕ್ಷ್ಮ ದತ್ತಾಂಶವನ್ನು ಗುಪ್ತಾ ಅವರು ಪಡೆದುಕೊಂಡಿದ್ದಾರೆ ಎಂದು ನಮೂದಿಸಲಾಗಿದೆ.

ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಬಗ್ಗೆ ಇತರ ರಕ್ಷಣಾ ಒಪ್ಪಂದಗಳಲ್ಲಿ ಪಡೆದಿದೆ ಎನ್ನಲಾಗುತ್ತಿರುವ ಕಿಕ್‌ಬ್ಯಾಕ್ ಪ್ರಕರಣ ಪ್ರಸ್ತುತ ತನಿಖೆಯ ವಿಷಯವಲ್ಲ ಎಂದು ಇಡಿ ಹೇಳಿದೆ. ಇತರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆಗಳನ್ನು ಕೈಗೊಳ್ಳಲಾಗುವುದು ಎನ್ನುವುದು ಇಡಿಯ ನಿಲುವು ಎಂದು ಮಿಡಿಯಾಪಾರ್ಟ್ ವರದಿಯಲ್ಲಿ ತಿಳಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಗುರುತಿಸಲಾಗದ ಇಡಿ ತನಿಖೆಯಲ್ಲಿನ ಇತರ ರಕ್ಷಣಾ ವ್ಯವಹಾರಗಳಲ್ಲಿ ಒಂದಾದ ಮೀಡಿಯಾಪಾರ್ಟ್ ಪಡೆದ ಮಾಹಿತಿಯ ಪ್ರಕಾರ, 36 ರಫೇಲ್ ಜೆಟ್‌ಗಳಿಗಾಗಿ 2016 ರಲ್ಲಿ ಸಹಿ ಮಾಡಿದ ಅಂತರ-ಸರ್ಕಾರಿ ಒಪ್ಪಂದ (ಐಜಿಎ) ಆಗಿದೆ ಎಂದು ವರದಿ ಹೇಳಿದೆ.

ರಫೇಲ್ ಒಪ್ಪಂದದಲ್ಲಿ ಡಸಾಲ್ಟ್ ಏವಿಯೇಷನ್ ​​ತಪ್ಪು ಮಾಡಿದೆ ಎನ್ನುವ ಹೊಸ ಆರೋಪಗಳನ್ನು ಅದು ತಿರಸ್ಕರಿಸಿದೆ. ಒಪ್ಪಂದದ ಸಿಎಜಿ ಲೆಕ್ಕಪರಿಶೋಧನೆಯನ್ನು ಉಲ್ಲೇಖಿಸಿ, ರಫೇಲ್ ಜೆಟ್‌ಗಳ ಅಂತಿಮ ವೆಚ್ಚವು ಆರಂಭಿಕ ಎಂಎಂಆರ್‌ಸಿಎ ಟೆಂಡರ್ ಕೊಡುಗೆಗಿಂತ 17% ಕಡಿಮೆಯಾಗಿದೆ ಮತ್ತು 2019 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ತನಿಖೆ ನಡೆಸಲು ಸಾಕಷ್ಟು ಆಧಾರಗಳಿಲ್ಲ ಎಂದು ವರದಿ ತಿಳಿಸಿದೆ. ಆದರೆ ಜಾರಿ ನಿರ್ದೇಶನಾಲಯವು ಅಗಸ್ಟಾ ವೆಸ್ಟ್ಲ್ಯಾಂಡ್ ತನಿಖೆಯಲ್ಲಿ ಸಂಗ್ರಹಿಸಿದ ಮಾಹಿತಿ ಇಲ್ಲದೆ ಈ ಒಪ್ಪಂದದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಏಪ್ರಿಲ್ 2015 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 36 ರಫೇಲ್ ಜೆಟ್‌ಗಳನ್ನು ನೇರವಾಗಿ ಖರೀದಿಸುವುದಾಗಿ ಘೋಷಿಸಿದ್ದರು. ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ “ನಿರ್ಣಾಯಕ ಕಾರ್ಯಾಚರಣೆಯ ಅವಶ್ಯಕತೆ” ಯನ್ನು ಉಲ್ಲೇಖಿಸಿದ್ದರು. ಒಪ್ಪಂದದ ಮಾತುಕತೆಗಳಲ್ಲಿ, ಫ್ರಾನ್ಸ್ ವಾಗ್ದಾನ ಮಾಡಿದಂತೆ, ರಫೇಲ್ ಜೆಟ್‌ಗಳ ಬೆಲೆ ಡಸಾಲ್ಟ್ ನೀಡಿರುವ ಅತ್ಯಂತ ಕಡಿಮೆ ಮೊತ್ತವಾಗಿರಬೇಕು ಮತ್ತು ಟೈಫೂನ್ ಜೆಟ್‌ ಡೀಲಿನಲ್ಲಿ 20% ರಿಯಾಯಿತಿಗಾಗಿ 2014 ರಲ್ಲಿ ಯುರೋಫೈಟರ್ ಪ್ರಸ್ತಾಪದಂತೆ ಇರಬೇಕು ಎನ್ನಲಾಗಿತ್ತು.

“ಮಾನದಂಡ” ಲೆಕ್ಕಾಚಾರದ ನಂತರ, ಭಾರತೀಯ ಸಮಾಲೋಚಕರು ಆಗಸ್ಟ್ 2015 ರ ಗೌಪ್ಯ ವರದಿಯಲ್ಲಿ, ಜೆಟ್‌ಗಳ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಒಟ್ಟಾರೆ ಖರೀದಿ ಬೆಲೆ € 5.06 ಬಿಲಿಯನ್ ಆಗಿರಬೇಕು ಎಂದು ತೀರ್ಮಾನಿಸಿದ್ದರೆಂದು ವರದಿ ಹೇಳಿದೆ.  ಆದರೆ, ಜನವರಿ 2016 ರಲ್ಲಿ, ಡಸಾಲ್ಟ್ ಒಪ್ಪಂದದಲ್ಲಿ ಪ್ರಸ್ತಾಪಿಸಿದ ಬೆಲೆಗಿಂತ ದುಪ್ಪಟ್ಟು ಬೆಲೆ ನಿರ್ಧರಿಸಿತ್ತು. ಇದರಲ್ಲಿ ಕ್ಷಿಪಣಿ ಉಪಕರಣಗಳನ್ನು ಹೊರತುಪಡಿಸಿ € 10.7 ಬಿಲಿಯನ್ ಎಂದು ಹೊಸ ಬೆಲೆ ನಿಗದಿಪಡಿಸಲಾಯಿತು.

ಪತ್ರಿಕಾ ವರದಿಯ ಪ್ರಕಾರ ಮಾತುಕತೆಯ ಪ್ರಕ್ರೀಯೆ ತಡೆಯಲಾಗಿತ್ತು ಮತ್ತು ಸುಶೇನ್ ಗುಪ್ತಾ ಭಾರತೀಯ ಸಮಾಲೋಚನಾ ತಂಡದ (ಐಎನ್ಟಿ) ಸಭೆಗಳ ಮಿನಿಟ್ಸ್ ವಿವರಗಳನ್ನು ಪಡೆದಿದ್ದರು. ಅದಷ್ಟೇ ಅಲ್ಲದೆ, ಫ್ರೆಂಚ್ಗೆ ಸಲ್ಲಿಸಲು ತಯ್ಯಾರಿಸಲಾಗಿದ್ದ ಪ್ರಸ್ತಾವನೆಗಳು, ವಿವರವಾದ ಟಿಪ್ಪಣಿಗಳು ಮತ್ತು ದರ ಲೆಕ್ಕಾಚಾರಗಳು ಒಳಗೊಂಡಿರುವ ದಾಖಲೆಗಳನ್ನು ಸಹ ಸುಶೇನ್ ಗುಪ್ತಾ ಪಡೆದಿದ್ದರು. ಜೆಟ್ ಗಳ ವೆಚ್ಚ ನಿರ್ಧರಿಸಲು ಬಳಸಿದ ವಿಧಾನಗಳ ವಿವರ ಕೂಡ ಗುಪ್ತಾ ಪಡೆದಿದ್ದರು. ಅಷ್ಟೇ ಅಲ್ಲದೆ ಗುಪ್ತಾ ಅವರು ಖರೀದಿಯ ಬೆಲೆಯನ್ನು ಲೆಕ್ಕಹಾಕಲು ಐಎನ್‌ಟಿಯ ಒಬ್ಬ ಸದಸ್ಯ ತಯ್ಯಾರಿಸಿದ ಎಕ್ಸೆಲ್ ಶೀಟನ್ನು ಸಹ ಪಡೆದರು ಎಂದು ವರದಿ ತಿಳಿಸಿದೆ.

ಅಂತಿಮವಾಗಿ ಭಾರತೀಯ ಅಧಿಕಾರಿಗಳು ತಾವೇ ಆರು ತಿಂಗಳ ಹಿಂದೆ ತಿರಸ್ಕರಿಸಿದ್ದ € 7.87 ಬಿಲಿಯನ್ ವೆಚ್ಚದ ಫ್ರೆಂಚ್ ಪ್ರಸ್ತಾಪವನ್ನು ಮತ್ತೆ ಒಪ್ಪಿಕೊಂಡಿದ್ದರು. ಈ ವರದಿಯು ದಿ ಹಿಂದೂ ಪತ್ರಿಕೆ ಅಂದು ನಡೆಸಿದ ತನಿಖಾ ವರದಿಗಳ ಸರಣಿಯನ್ನು ಉಲ್ಲೇಖಿಸಿದೆ. ಈ ವರದಿಯಲ್ಲಿ ಭ್ರಷ್ಟಾಚಾರ-ವಿರೋಧಿ ಷರತ್ತುಗಳನ್ನು ಈ ಖರೀದಿ ಒಪ್ಪಂದದಿಂದ ಹೊರಗಿಟ್ಟು ಮತ್ತು ಐಎನ್‌ಟಿಯನ್ನು  ಕಡೆಗಣಿಸಿ ಪ್ರಧಾನ ಮಂತ್ರಿಗಳ ಕಾರ್ಯಾಲಯವು ನೇರವಾಗಿ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆ ವಿಸ್ತ್ರತವಾಗಿ ವಿವರಿಸಿದೆ.

ಮಾರ್ಚ್ 2017 ರಲ್ಲಿ, ಗುಪ್ತಾ ಕುಟುಂಬಕ್ಕೆ ಸೇರಿದ ಭಾರತೀಯ ಕಂಪನಿಗಳಲ್ಲಿ ಒಂದಾಗಿರುವ ಡೆಫ್ಸಿಸ್ ಸೊಲ್ಯೂಷನ್ಸ್, ಮೂರು ಭಾಗಗಳ ಮೀಡಿಯಾಪಾರ್ಟ್ ಸರಣಿಯ ಒಂದು ಭಾಗದಲ್ಲಿ ಹೇಳಿರುವಂತೆ ರಫೇಲ್ ಜೆಟ್‌ನ 50 ಪ್ರತಿಕೃತಿ ಮಾದರಿಗಳ ಉತ್ಪಾದನೆಗಾಗಿ ಡಸಾಲ್ಟ್ ಗೆ ಒಂದು ಮಿಲಿಯನ್ ಯುರೋಗಳಿಗೆ ಇನ್‌ವಾಯ್ಸ್ ಮಾಡಿತ್ತು ಎನ್ನಲಾಗಿದೆ.

ರಫೇಲ್ ಒಪ್ಪಂದದ ಉಪ ಗುತ್ತಿಗೆದಾರರಲ್ಲಿ ಒಬ್ಬರಾದ ಡಸಾಲ್ಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಡೆಫ್ಸಿಸ್ ಸೊಲ್ಯೂಷನ್ಸ್ ಹೆಸರು ಪ್ರಸ್ತಾಪಿಸಲಾಗಿದೆ. ವರದಿಯಲ್ಲಿ ಸೇರಿಸಲಾಗಿರುವ ಒಪ್ಪಂದದ ಸ್ವರೂಪ ಮತ್ತು ವೆಚ್ಚಗಳ ವಿವರಗಳನ್ನು ಮಿಡಿಯಾಪಾರ್ಟ್ಗೆ ಬಹಿರಂಗಪಡಿಸಲು ಡಸಾಲ್ಟ್ ನಿರಾಕರಿಸಿದೆ. ಇದಲ್ಲದೆ, ಡಸಾಲ್ಟ್ ಮತ್ತು ಅದರ ಫ್ರೆಂಚ್ ಕೈಗಾರಿಕಾ ಪಾಲುದಾರ ಥೇಲ್ಸ್ ಅವರು, ಸುಶೇನ್ ಗುಪ್ತಾ ಅವರ ಕಡಲಾಚೆಯ ಖಾತೆಗಳು ಮತ್ತು ಚಿಪ್ತು ಕಂಪನಿಗಳಿಗೆ ರಹಸ್ಯವಾಗಿ ಕಮಿಷನ್ ರೂಪದಲ್ಲಿ ಹಲವಾರು ಮಿಲಿಯನ್ ಯೂರೋಗಳನ್ನು ಪಾವತಿಸಿದ್ದಾರೆ ಮತ್ತು ಸಾಫ್ಟ್‌ವೇರ್ ಸಲಹೆಗಾಗಿ ಹೆಚ್ಚುವರಿ ಇನ್‌ವಾಯ್ಸ್‌ಗಳನ್ನು ಬಳಸಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ.

ಈ ವಿಷಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುವ ಸಲುವಾಗಿ ಇಮೇಲ್ ಮತ್ತು ಬೇರೆ ಮೂಲಗಳ ಮೂಲಕ ಹಲವಾರು ಬಾರಿ ಸಂಪರ್ಕಿಸಿದರು, ಸುಶೇನ್ ಗುಪ್ತಾ ಸಂದರ್ಶನಕ್ಕಾಗಿ ಮೀಡಿಯಾಪಾರ್ಟ್ ನ ಮನವಿಗೆ ಸ್ಪಂದಿಸಲಿಲ್ಲ ಎಂದು ವರದಿ ತಿಳಿಸಿದೆ. ಮಿಡಿಯಾಪಾರ್ಟ್ ವರದಿಗಳಿಗೆ ಪ್ರತಿಕ್ರಿಯಿಸಿದ ಡಸಾಲ್ಟ್ ಏವಿಯೇಷನ್ ​​ವಕ್ತಾರರು ಮುಖ್ಯವಾಗಿ ಭಾರತದೊಂದಿಗಿನ ಒಪ್ಪಂದವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಳ್ಳಲಾಗಿದೆ ಹಾಗು ಫ್ರೆಂಚ್ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸೇರಿದಂತೆ ಅಧಿಕೃತ ಸಂಸ್ಥೆಗಳಿಂದ ಹಲವಾರು ನಿಯಂತ್ರಣಗಳು ಅನುಸರಿಸಿ ಈ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ ಹಾಗು ಯಾವುದೇ ನಿಯಮಗಳು ಉಲ್ಲಂಘಿಸಿಲ್ಲ ಎಂದು ಪ್ರತಿಕ್ರೀಯಿಸಿದ್ದಾರೆ.

ಭಾರತದೊಂದಿಗಿನ 36 ರಫೇಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದವನ್ನು ಎರಡೂ ಸರ್ಕಾರಗಳು ನೇರವಾಗಿ ಮಾಡಿಕೊಂಡಿದ್ದು, ಈ ಒಪ್ಪಂದ ಸ್ಥಾಪಿತ ನಿಯಮ ಮತ್ತು ಮಾನದಂಡಗಳ ಅನುಸಾರವೇ ಮಾಡಲಾಗಿದೆ. ಇಲ್ಲಿ ಎರಡೂ ಸರಕಾರ ಮತ್ತು ಅವುಗಳ ಕೈಗಾರಿಕಾ ಪಾಲುದಾರರ ನಡುವೆ ಅತ್ಯಂತ ಪಾರದರ್ಶಕತೆಯ ಮೂಲಕ ಒಪ್ಪಂದ ಪ್ರಕ್ರೀಯೆ ನಡೆದಿದೆ ಎಂದು ಡಸಾಲ್ಟ್ ಹೇಳಿದೆ.

ರಿಲಾಯನ್ಸ್ ಗ್ರೂಪ್‌ನೊಂದಿಗಿನ ಆಫ್‌ಸೆಟ್ ಒಪ್ಪಂದದ ಪ್ರಕಾರ, 2017 ರಲ್ಲಿ ಜಂಟಿ ಉದ್ಯಮವನ್ನು ಸ್ಥಾಪಿಸಲಾಯಿತು ಮತ್ತು ಅದರ ಅನ್ವಯ ರಿಲಾಯನ್ಸ್ ಕಂಪನಿಯು ನಾಗ್ಪುರದಲ್ಲಿ ಒಂದು ಸ್ಥಾವರವನ್ನು ನಿರ್ಮಿಸಿದೆ, ಅದು 2018 ರಿಂದ ಹಲವಾರು ಫಾಲ್ಕನ್ ಭಾಗಗಳು ಮತ್ತು ಬಿಡಿ ಉಪಕರಣಗಳನ್ನು ಉತ್ಪಾದಿಸುತ್ತಿದೆ. “ಡಸಾಲ್ಟ್ ಏವಿಯೇಷನ್ ​​ಮತ್ತು ಅದರ ಪಾಲುದಾರರು ಭಾರತದಲ್ಲಿನ 60 ಕಂಪನಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ ಮತ್ತು ಸಂಭಾವ್ಯ ಹೊಸ ಸಹಕಾರ ಹಾಗು ವ್ಯವಹಾರ ಒಪ್ಪಂದಗಳನ್ನು ಸ್ಥಾಪಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ಡಸಾಲ್ಟ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಒಟ್ಟಾರೆ ರಫೇಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗಳಿಗೆ ಅತ್ಯಂತ ಗರಿಷ್ಠ ಮೊತ್ತದ ಕಮಿಷನ್ ನೀಡಲಾಗಿದೆ ಎನ್ನಲಾಗುತ್ತಿದ್ದು ಈ ಪ್ರಕರಣದ ಒಳಸುಳಿಗಳು ನಡೆದಿದೆ ಎನ್ನಲಾಗುತ್ತಿರುವ ಹಣಕಾಸಿನ ಅವ್ಯವಹಾರ ಮತ್ತು ಭ್ರಷ್ಟಾಚಾರಗಳು ಬಯಲಿಗೆ ಬರಬೇಕಾದರೆ ಅತ್ಯಂತ ಪಾರದರ್ಶಕವಾದ ಅಂತರಾಷ್ಟ್ರೀಯ ತನಿಖೆಯ ಅಗತ್ಯವಿದೆ.




Leave a Reply

Your email address will not be published. Required fields are marked *

error: Content is protected !!