ವಿಮಾನ ಅಪಘಾತ: ಕಣ್ಮರೆಯಾಗಿದ್ದ ಮಕ್ಕಳು 40 ದಿನಗಳ ನಂತ್ರ ಪತ್ತೆ

122

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಬೊಗೋಟಾ: ಕಳೆದ ಮೇ 1ರಿಂದ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನ ಪತನಗೊಂಡು, ಪೈಲೆಟ್, ಮಹಿಳೆ ಹಾಗೂ ಮತ್ತೊಬ್ಬರು ಮೃತಪಟ್ಟಿದ್ದರು. 4 ಮಕ್ಕಳು ಕಣ್ಮರೆಯಾಗಿದ್ದವು.

ಹಣೆಬರಹ ಚೆನ್ನಾಗಿದ್ದರೆ ಏನಾದರೂ ಬದುಕುತ್ತಾರೆ ಎಂದು ಆಗಾಗ ಹೇಳಲಾಗುತ್ತೆ. ಆ ಮಾತು ಈ ನಾಲ್ಕು ಮಕ್ಕಳ ಬಾಳಲ್ಲಿ ನಿಜವಾಗಿದೆ ವಿಶ್ವದ ಅತಿದೊಡ್ಡ ಹಾಗೂ ದಟ್ಟ ಅರಣ್ಯವಾದ ಅಮೆಜಾನ್ ಕಾಡಿನಲ್ಲಿ 40 ದಿನಗಳಿಂದ ಬದುಕುಳಿದ ಮಕ್ಕಳು ಪತ್ತೆಯಾಗಿದ್ದಾರೆ. ಇದು ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸಿದೆ.

ವಿಮಾನ ಅಪಘಾತದಲ್ಲಿ ಮೂವರು ಮೃತಪಟ್ಟು, ಈ ನಾಲ್ಕು ಮಕ್ಕಳು ಬದುಕುಳಿದಿದ್ದು ಪವಾಡ. ಅದು 40 ದಿನಗಳಿಂದ ದಟ್ಟ ಕಾಡಿನಲ್ಲಿ ಅದ್ಹೇಗೆ ಉಳಿದುಕೊಂಡಿದ್ದರೂ, ಕೊನೆಗೂ ರಕ್ಷಣಾ ಅಧಿಕಾರಿಗಳಿಗೆ ಪತ್ತೆಯಾಗಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!