ಬಹಿರಂಗವಾಯ್ತು ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ವಿವರ

503

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಕುತೂಹಲವಿತ್ತು. ಸಾರ್ವಜನಿಕ ಭಾಷಣದ ವೇಳೆ ಮೋದಿಗಾಗಿ ರೆಡಿಯಾದ ಟೆಲಿಪ್ರಾಂಪ್ಟರ್ ಬಗ್ಗೆ ಬೆಳಗಾವಿ ಮೂಲದ ವಕೀಲರೊಬ್ಬರು ಕೇಳಿದ ಮಾಹಿತಿ ಹಕ್ಕಿನ ಅರ್ಜಿ ಅಡಿಯಲ್ಲಿ ಇದೀಗ ಬಹಿರಂಗವಾಗಿದೆ.

ಆರ್ ಟಿಐ ಅರ್ಜಿ ಸಲ್ಲಿಸಿದ್ದ ವಕೀಲ ಉಗಾರೆ

ಬೆಳಗಾವಿ ಮೂಲದ ವಕೀಲ ಸುರೇಂದ್ರ ಉಗಾರೆ, 2014ರಿಂದ ಇಲ್ಲಿಯವರೆಗೂ ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ಕಂಪನಿ, ಅದರ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳನ್ನು ಕೇಳಿದ್ದರು. ಅದಕ್ಕೆ ಪ್ರಸಾರ ಭಾರತಿ ದೂರದರ್ಶನ ವಿಭಾಗದ ಮುಖ್ಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅಖಿಲೇಶ್ ಕುಮಾರ್ ಶರ್ಮಾ ಉತ್ತರಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಷಣದ ವೇಳೆ ಬಳಸುವ ತಂತ್ರಜ್ಞಾನದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಅದಕ್ಕೆ ಪೂರಕವಾದ ಮಾಹಿತಿ ಲಭ್ಯವಾಗಿದೆ.

ಸುರೇಂದ್ರ ಉಗಾರೆ, ಆರ್ ಟಿಐ ಅರ್ಜಿ ಸಲ್ಲಿಸಿದ್ದ ವಕೀಲರು

ಪ್ರಧಾನಿ ಆಟೋ ಸ್ಕ್ರಿಪ್ಟ್ ಕಂಪನಿಯ ಟೆಲಿಪ್ರಾಂಪ್ಟರ್ ಬಳಸುತ್ತಿದ್ದಾರೆ. ದೆಹಲಿ ದೂರದರ್ಶನ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ನಿರ್ವಹಣಾ ವಿಭಾಗದ ಸಿಬ್ಬಂದಿ ಇದನ್ನು ನೋಡಿಕೊಳ್ಳುತ್ತೆ. ಅವರಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!