ಟಾಲಿವುಡ್ ನಲ್ಲೂ ‘ಖರಾಬು’ ಹವಾ

288

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಹೊಸ ಹೊಸ ದಾಖಲೆಗಳಿಗೆ ಈ ಚಿತ್ರ ಮುನ್ನುಡಿ ಬರೆಯುತ್ತಿದೆ. ಮೊದಲ ಬಾರಿಗೆ ಡೈಲಾಗ್ ಟ್ರೇಲರ್ ಬಿಟ್ಟು ಯುವ ಪಡೆಯನ್ನ ಹುಚ್ಚೆಬ್ಬಿಸಿತು. ಈ ಮೊದಲು ಯಾರು ಡೈಲಾಗ್ ಟ್ರೇಲರ್ ಬಿಟ್ಟಿರಲಿಲ್ಲ.

ಇದಾದ್ಮೇಲೆ ಖರಾಬು ಅನ್ನೋ ಸಾಂಗ್ ಏಪ್ರಿಲ್ 5ರಂದು ರಿಲೀಸ್ ಆಗಿ ಬರೋಬ್ಬರಿ 10 ಕೋಟಿ ಜನರು ವೀಕ್ಷಣೆ ಮಾಡುವ ಮೂಲಕ ಹೊಸ ದಾಖಲೆ ಬರೆಯಿತು. ಚಂದನವನದಲ್ಲಿ ಇದುವರೆಗೂ ಯಾವ ಸ್ಟಾರ್ ನಟನ ಹಾಡು ಇಷ್ಟೊಂದು ವೀವ್ಸ್ ಪಡೆದಿಲ್ಲ. ಇದೀಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಧ್ರುವ ಸರ್ಜಾ, ಅಲ್ಲಿಯೂ ಧೂಳೆಬ್ಬಿಸಿದ್ದಾನೆ.

ಪೊಗರು ಚಿತ್ರದ ಮೂಲಕ ಮೊದಲ ಬಾರಿಗೆ ಟಾಲಿವುಡ್ ಎಂಟ್ರಿ ಪಡೆದಿರುವ ನಟ, ಖರಾಬು ಹಾಡು ಹೊಸ ಅಲೆ ಎಬ್ಬಿಸಿದೆ. ಆಗಸ್ಟ್ 6ರಂದು ರಿಲೀಸ್ ಸಾಂಗ್ ಕಳೆದ ಎರಡು ದಿನಗಳಿಂದ ಟ್ರೆಂಡ್ ಕ್ರಿಯೇಟ್ ಮಾಡಿದೆ. ಕರ್ನಾಟಕದಂತೆ ಆಂದ್ರ, ತೆಲಂಗಾಣದಲ್ಲಿಯೂ ಈ ಸಾಂಗ್ ಇತಿಹಾಸ ನಿರ್ಮಿಸಿದೆ. ಈಗಾಗ್ಲೇ ಬರೋಬ್ಬರಿ 5 ಮಿಲಿಯನ್ಸ್ ಈ ಹಾಡು ನೋಡಿದ್ದಾರೆ.

ಕನ್ನಡದಲ್ಲಿ ಚಂದನ ಶೆಟ್ಟಿ ಈ ಹಾಡುನ್ನ ಹಾಡಿದ್ದಾರೆ. ತೆಲುಗಿನಲ್ಲಿ ಅನುರಾಗ ಕುಲಕರ್ಣಿ ಈ ಸಾಂಗ್ ಹಾಡಿದ್ದು, ಅಲ್ಲಿಯ ಜನರನ್ನ ಸಹ ಹುಚ್ಚೆಬ್ಬಿಸಿದೆ. ನಂದ ಕಿಶೋರ ನಿರ್ದೇಶನ ಪೊಗರು ಮೂವಿ ದಾಖಲೆ ಬರೆಯಲು ರೆಡಿಯಾಗಿದೆ.




Leave a Reply

Your email address will not be published. Required fields are marked *

error: Content is protected !!