ಸರ್ಕಾರದ ಒಪ್ಪಿಗೆಗೂ ಮೊದ್ಲೇ ನಾಳೆಯಿಂದ ಖಾಸಗಿ ಶಾಲೆಗಳು ಶುರು?

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಸೋಂಕಿನಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳನ್ನ ಬಂದ್ ಮಾಡಲಾಗಿತ್ತು. ಕಳೆದೊಂದುವರೆ ವರ್ಷಗಳಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿವೆ. ಇದೀಗ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಒಪ್ಪಿಗೆ ನೀಡಿದ್ರಿಂದ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ರುಪ್ಸಾ ಮುಂದಾಗಿದೆ.

ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜುಲೈ 31ರೊಳಗೆ ತಮ್ಗೆ ಸರ್ಕಾರ ನಿರ್ಧಾರ ತಿಳಿಸಬೇಕು ಎಂದು ಖಾಸಗಿ ಶಾಲೆಗಳ ಸಂಘಟನೆಗಳ ಒಕ್ಕೂಟ ಗಡುವು ನೀಡಿತ್ತು. ಒಂದು ವೇಳೆ ನಿರ್ಧಾರ ಪ್ರಕಟಿಸದೆ ಹೋದರೆ ಆಗಸ್ಟ್ 2ರಿಂದ ಶಾಲೆಗಳನ್ನ ಪ್ರಾರಂಭಿಸಲಾಗುವುದು ಎಂದಿತ್ತು. ಅದರಂತೆ ಸೋಮವಾರದಿಂದ ಶಾಲೆಗಳ ಪ್ರಾರಂಭಕ್ಕೆ ಮುಂದಾಗಿದ್ದು ಈ ಸಂಬಂಧ ರುಪ್ಸಾ ಅಧ್ಯಕ್ಷ ಹಾಲನೂರ ಲೇಪಾಕ್ಷಿ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!