ಸಚಿವ ಸಂಪುಟ ಸವಾಲು: ನಾಳೆ ದೆಹಲಿಗೆ ಸಿಎಂ

206

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಎದುರು ಇದೀಗ ಸಂಪುಟ ಸವಾಲು ಎದುರಾಗಿದೆ. ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವರಾಗಿದ್ದವರು ಸೇರಿದಂತೆ ಹೊಸ ಮುಖಗಳು ಮಂತ್ರಿಗಿರಿ ಬೇಕು ಎನ್ನುತ್ತಿವೆ. ಹೀಗಾಗಿ ನೂತನ ಸಿಎಂಗೆ ಒಂದಿಷ್ಟು ಸವಾಲುಗಳು ಎದುರಾಗಿವೆ.

ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ 17 ಜನ ಶಾಸಕರು ಸೇರಿದಂತೆ ಹಿರಿಯ ನಾಯಕರ ಜೊತೆಗೆ ಮೊದಲ ಬಾರಿಗೆ ಸಚಿವರಾಗಬೇಕು ಎನ್ನುತ್ತಿರುವವರಿಂದಾಗಿ, ಯಾರಿಗೆ ಗೇಟ್ ಪಾಸ್ ಕೊಡಬೇಕು. ಯಾರನ್ನ ಮುಂದುವರೆಸಬೇಕು. ಹೊಸಬರಲ್ಲಿ ಯಾರಿಗೆ ಅವಕಾಶ ಕೊಡಬೇಕು ಅನ್ನೋದು ಒಂದಿಷ್ಟು ತಲೆನೋವು ತರಿಸಿದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದ ಸಿಎಂಗೆ ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್ ನಿಂದ ಇನ್ನು ಗ್ರೀನ್ ಸಿಕ್ಕಿಲ್ಲ. ಹೀಗಾಗಿ ಸೋಮವಾರ ಮತ್ತೆ ದೆಹಲಿಗೆ ಬರಲು ತಿಳಿಸಲಾಗಿದೆ. ಈಗಾಗ್ಲೇ ಆಗಸ್ಟ್ 5ಕ್ಕೆ ಸಚಿವ ಸಂಪುಟ ರಚನೆಗೆ ದಿನಾಂಕ ನಿಗದಿಯಾಗಿದೆಯಂತೆ. 33 ಶಾಸಕರನ್ನ ಏಕಕಾಲದಲ್ಲಿ ಸಚಿವರನ್ನಾಗಿ ಮಾಡಲು ನಿರ್ಧಾರಕ್ಕೆ ಬರಲಾಗಿದ್ದು, ಸಚಿವ ಆಕಾಂಕ್ಷಿಗಳ ಪಟ್ಟಿಯನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾರನ್ನ ದೆಹಲಿ ನಾಯಕರು ಸಚಿವರನ್ನಾಗಿ ಮಾಡುತ್ತಾರೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!