ರಾಹುಲ್ ಗೆ ಸಹೋದರಿ ಸಾಥ್

288

ಪ್ರಜಾಸ್ತ್ರ ಸುದ್ದಿ

ಕಂಡ್ವಾ: ಕಳೆದ ಸೆಪ್ಟೆಂಬರ್ 7ರಿಂದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ಸಾಗಿದೆ. ಬುಧವಾರ ಮಹಾರಾಷ್ಟ್ರದಿಂದ ಮಧ್ಯಪ್ರದೇಶ ಪ್ರವೇಶ ಮಾಡಿದೆ. ಗುರುವಾರ ರಾಹುಲ್ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಯಾತ್ರೆಯಲ್ಲಿ ಭಾಗವಹಿಸಿದರು.

ಯಾತ್ರೆಯಲ್ಲಿ ಇದೆ ಮೊದಲ ಬಾರಿಗೆ ಸಹೋದರಿ ಹೆಜ್ಜೆ ಹಾಕಿದ್ದು, ಜೊತೆಗೆ ಪತಿ ರಾಬರ್ಟ್ ವಾದ್ರಾ, ಮಗ ರೆಹಾನ್ ಸಹ ಮಾವನೊಂದಿಗೆ ಪಾದಯಾತ್ರೆ ನಡೆಸಿದರು. ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕ ಸಚಿನ್ ಪೈಲೆಟ್ ಬೋರಾಂವ್ ದಲ್ಲಿ ರಾಹುಲ್ ಗೆ ಜೊತೆಯಾದರು.

ಬಧುವಾರ ಮಾತನಾಡಿದ ರಾಹುಲ್ ಗಾಂಧಿ, ನಾವು ಕನ್ಯಾಕುಮಾರಿಯಿಂದ ಪಾದಯಾತ್ರೆ ಶುರು ಮಾಡಿದಾಗ ವಿರೋಧ ಪಕ್ಷದವರು 3,300 ಕಿಲೋ ಮೀಟರ್ ಪಾದಯಾತ್ರೆ ಸಾಧ್ಯವಿಲ್ಲ ಎಂದಿದ್ದರು. ಈಗ ನಾವು ಮಧ್ಯಪ್ರದೇಶಕ್ಕೆ ಬಂದಿದ್ದೇವೆ. 370 ಕಿಲೋ ಮೀಟರ್ ಸಂಚರಿಸಿದ್ದೇವೆ. ಈ ಯಾತ್ರೆ ಶ್ರೀನಗರ ತಲುಪಿ ಅಲ್ಲಿ ತ್ರಿವರ್ಣಧ್ವಜ ಹಾರಿಸಲಿದ್ದೇವೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!