ತರಕಾರಿ ಮಾರ್ಕೆಟ್ ಗೆ 3-4 ಕಡೆ ಜಾಗವಿದೆ: ವಿಠ್ಠಲ ಕೊಳ್ಳೂರು

424

ಸಿಂದಗಿ: ಮಾರ್ಕೆಟ್ ನಿರ್ಮಾಣಕ್ಕೆ ಆಗ್ರಹಿಸಿ ತರಕಾರಿ ಹಾಗೂ ಹಣ್ಣು ವ್ಯಾಪಾರಸ್ಥರು ನಡೆಸ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಿ ಧರಣಿ ನಡೆಸ್ತಿದ್ದು, ತಾಲೂಕು ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ವಿಠ್ಠಲ ಕೊಳ್ಳೂರು ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

ಸಿಂದಗಿ ಪಟ್ಟಣ ಪಂಚಾಯ್ತಿಯಿಂದ ಪುರಸಭೆಯಾಗಿ ಬದಲಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹಲವಾರು ವಿಚಾರಗಳಲ್ಲಿ ಅಭಿವೃದ್ಧಿಯಾಗಬೇಕು. ತರಕಾರಿ ಹಾಗೂ ಹಣ್ಣು ವ್ಯಾಪಾರಸ್ಥರ ಮಾರ್ಕೆಟ್ ಬೇಡಿಕೆ ನ್ಯಾಯಯುತವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತ್ನಾಡಿ ಮನವಿ ಸಲ್ಲಿಸುತ್ತೇನೆ ಅಂತಾ ತಿಳಿಸಿದ್ರು.

ಹಳೆ ತಹಶೀಲ್ದಾರ್ ಕಚೇರಿ, ಹಳೆ ಪ್ರವಾಸಿ ಮಂದಿರ ಹಾಗೂ ಎಪಿಎಂಸಿಯಲ್ಲಿ ಜಾಗವಿದೆ. ಇವುಗಳಲ್ಲಿ ಆಯ್ಕೆ ಮಾಡಿ ಮಾರುಕಟ್ಟೆ ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಅಂತಾ ಹೇಳಿದ್ರು. ಅಲ್ದೇ, ಎಪಿಎಂಸಿಯಲ್ಲಿ ಕುರಿ ವ್ಯಾಪಾರ ನಡೆಯುತ್ತೆ. ಅದನ್ನ ಬೇರೆ ಕಡೆ ಸ್ಥಳಾಂತರಿಸಬಹುದೆಂದು ಹೇಳಿದ್ರು. ವ್ಯಾಪಾರಸ್ಥರ ಬೇಡಿಕೆ ಇರೋದು ಹಳೆ ತಹಶೀಲ್ದಾರ್ ಕಚೇರಿಯ ಜಾಗವಾಗಿದ್ದು, ಅದು 1.27 ಎಕರೆ ವಿಸ್ತೀರ್ಣದಲ್ಲಿದೆ. ಇನ್ನೊಂದು ಹಳೆ ಪ್ರವಾಸಿ ಮಂದಿರವಿರುವ ಜಾಗ 1.34 ಎಕರೆಯಿದೆ.

ಹಳೆ ತಹಶೀಲ್ದಾರ್ ಕಚೇರಿ ಜಾಗ
ಹಳೆ ಪ್ರವಾಸಿ ಮಂದಿರ ಜಾಗ



Leave a Reply

Your email address will not be published. Required fields are marked *

error: Content is protected !!