ಪತ್ನಿಗೆ ಡಿವೋರ್ಸ್ ನೀಡಿದ ಶಿಖರ್ ಧವನ್

173

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾದ ಸ್ಟಾರ್ ಆಟಗಾರ ಶಿಖರ್ ಧವನ್ ಪತ್ನಿ ಆಯೇಷಾ ಮುಖರ್ಜಿಗೆ ಡಿವೋರ್ಸ್ ನೀಡಿದ್ದಾರೆ. ಪತ್ನಿಯಿಂದ ತಮಗೆ ಸಾಕಷ್ಟು ಮಾನಸಿಕ ಹಿಂಸೆಯಾಗುತ್ತಿದೆ ಎಂದು ಕೋರ್ಟ್ ನಲ್ಲಿ ವಾದ ಮಂಡಿಸಿದರು. ಪತಿ ಮಾಡಿದ ಆರೋಪಗಳನ್ನು ವಿರೋಧಿಸವಲ್ಲಿ ಹಾಗೂ ತನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲಿ ಆಯೇಷಾ ವಿಫಲರಾಗಿದ್ದು, ಕೋರ್ಟ್ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ.

ಪುತ್ರನಿಂದ ವರ್ಷಾನುಗಟ್ಟಲ್ಲೇ ದೂರು ಇರುವಂತೆ ಮಾಡಿದ್ದು ಅಲ್ಲದೆ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಶಿಖರ್ ಧವನ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆಯೇಷಾ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಎರಡು ಕಡೆ ಪೌರತ್ವವನ್ನು ಆಯೇಷಾ ಪಡೆದಿದ್ದು, ಶಿಖರ್ ಧವನ್ ಜೊತೆಗೆ ಎರಡನೇ ಮದುವೆಯಾಗಿದೆ.

2012ರಲ್ಲಿ ಶಿಖರ್ ಧವನ್ ಆಯೇಷಾ ಮುಖರ್ಜಿಯನ್ನು ಮದುವೆಯಾದರು. ಇವರಿಗೆ ಒಬ್ಬ ಮಗನಿದ್ದಾನೆ. ಶಿಖರ್ ಧವನ್ ಗಿಂತ ಆಯೇಷಾ 11 ವರ್ಷ ದೊಡ್ಡವರಾಗಿದ್ದಾರೆ. ಧವನ್ ಗೆ ಈಗ 37, ಆಯೇಷಾಗೆ 47 ವರ್ಷ ವಯಸ್ಸು. ಚೆನ್ನಾಗಿದ್ದ ದಾಂಪತ್ಯದಲ್ಲಿ ಅದೇನಾಗಿದೆಯೋ ಇದೀಗ ಬೇರ್ಪಟ್ಟಿದ್ದಾರೆ. ಮಗನನ್ನು ಭೇಟಿಯಾಗಲು, ವಿಡಿಯೋ ಕಾಲ್ ಮೂಲಕ ಮಾತನಾಡಲು ಕೋರ್ಟ್ ಅನುಮತಿ ನೀಡಿದೆ.




Leave a Reply

Your email address will not be published. Required fields are marked *

error: Content is protected !!