ಸುಶಾಂತ ಆತ್ಮಹತ್ಯೆ: ಸಲ್ಲು, ಬನ್ಸಾಲಿ, ಜೋಹರ್, ಏಕ್ತಾ ವಿರುದ್ಧ ಕೇಸ್.. ಏನಿದು ‘ಏಕಚಕ್ರಾಧಿಪತ್ಯ’ ರಹಸ್ಯ?

445

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ದುನಿಯಾದಲ್ಲಿ ಮಿಂಚುತ್ತಿದ್ದ ಯುವ ನಟ ಸುಶಾಂತ ಸಿಂಗ್ ರಜಪೂತ್ ಜೂನ್ 14ರಂದು ಸೂಸೈಡ್ ಮಾಡಿಕೊಂಡ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾದ. ಈ ಸಂಬಂಧ, ನಟ ಸಲ್ಮಾನ ಖಾನ್, ನಿರ್ದೇಶಕರಾದ ಸಂಜಯ ಲೀಲಾ ಬನ್ಸಾಲಿ, ಕರಣ ಜೋಹರ್, ಏಕ್ತಾ ಕಪೂರ್ ಸೇರಿ 8 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ವಕೀಲ ಸುಧೀರಕುಮಾರ ಓಜಾ ಎಂಬುವರು, 8 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಲಾಗಿದೆ ಎಂದು, 306, 109, 504 ಕಾಯ್ದೆ ಅಡಿಯಲ್ಲಿ ಬಿಹಾರದ ಮುಜಾಫರ್ ನಗರದಲ್ಲಿ ಕೇಸ್ ದಾಖಲಿಸಿದ್ದಾರೆ. ಇಷ್ಟಕ್ಕೂ ಈ 8 ಜನರ ವಿರುದ್ಧ ಕೇಸ್ ದಾಖಲಿಸಲು ಕಾರಣವಾಗಿದ್ದು ಏಕಚಕ್ರಾಧಿಪತ್ಯ. ಹೌದು, ಚಿತ್ರರಂಗ ಅನ್ನೋದು ಸಮುದ್ರ. ಇಲ್ಲಿ ಹೊಸಬರು ಈಜಿ ದಡ ಸೇರುವುದು ಕಷ್ಟ. ಸೌಥ್ ಸಿನಿ ದುನಿಯಾ ಅವಕಾಶ ನೀಡಿದ್ರೆ, ಬಾಲಿವುಡ್ ಅವಕಾಶ ಕಸಿದುಕೊಳ್ಳುತ್ತೆ.

ಲಾಯರ್ ಸುಧೀರಕುಮಾರ ಓಜಾ ಹೇಳುವ ಪ್ರಕಾರ, ಸುಶಾಂತ ನಟಿಸಬೇಕಿದ್ದ 7 ಚಿತ್ರಗಳಿಂದ ಕೈಬಿಡಲಾಗಿದೆ. ಇನ್ನು ಕೆಲವು ಚಿತ್ರಗಳನ್ನ ರಿಲೀಸ್ ಮಾಡದಂತೆ ತಡೆ ಹಿಡಿಯಲಾಗಿದೆಯಂತೆ. ಅದಕ್ಕೆ ಕಾರಣವಾಗಿರೋದು, ನಟ ಸಲ್ಮಾನ ಖಾನ್, ನಿರ್ದೇಶಕರಾದ ಸಂಜಯ ಲೀಲಾ ಬನ್ಸಾಲಿ, ಕರಣ ಜೋಹರ್, ಏಕ್ತಾ ಕಪೂರ್ ಸೇರಿ ಎಂಟು ಜನರಂತೆ.

ಬಾಲಿವುಡ್ ಸಿನಿಮಾ ಅತೀ ಹೆಚ್ಚು ನಿರ್ಮಾಣವಾಗುವುದು ಯಸ್ ರಾಜ್ ಫಿಲಂಸ್, ಖಾನ್ ಫಿಲಂಸ್, ಕರಣ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್, ಬನ್ಸಾಲಿ, ಕಪೂರ್ ಕುಟುಂಬದ ಕುಡಿಗಳಿಂದ ಮಾತ್ರ. ಉಳಿದಂತೆ ಸ್ಟಾರ್ ನಟರ ಕೆಲ ಸಂಸ್ಥೆಗಳಿಂದ. ಕಪ್ಪು ಹಣ, ರಾಜಕೀಯ, ಭೂಗತ ಜಗತ್ತಿನ ನಂಟಿನಿಂದ ಇವರೆಲ್ಲ ಸ್ವಜನಪಕ್ಷಪಾತ ನಡೆಸ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಬಾಲಿವುಡ್ ಆಳುತ್ತಿರುವರಿಂದ, ಸುಶಾಂತ ಸಿಂಗ್ ರಜಪೂತ್, ಕೇವಲ 6 ತಿಂಗಳಲ್ಲಿಯೇ ಸಹಿ ಮಾಡಿದ 7 ಚಿತ್ರಗಳನ್ನ ಕಳೆದುಕೊಂಡ. ಕೆಲವು ಚಿತ್ರಗಳು ರಿಲೀಸ್ ಆಗ್ಲೇ ಇಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ಬೆಳೆಯುವ ನಟ ಸುಶಾಂತ, ಇವರು ನೀಡುವ ಮಾನಸಿಕ ಕಿರುಕುಳಕ್ಕೆ ಖಿನ್ನತೆಗೆ ಒಳಗಾದ.  ಹೀಗಾಗಿ ನಟಿ ಕಂಗನಾ ರಣವತ್, ನಟ ಪ್ರಕಾಶ ರಾಜ್, ನಿರ್ದೇಶಕ ಅಭಿನವ ಕಶ್ಯಪ್ಪ ಸಹ ಸ್ವಜನಪಕ್ಷಪಾತದ ವಿರುದ್ಧ ಮಾತ್ನಾಡಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕು ಅಂದ್ರೆ ಸಾಮಾನ್ಯದ ಮಾತಲ್ಲ. ಅಲ್ಲಿ ರಾಜಕೀಯ, ಹಣಬಲ, ತೋಳಬಲ, ಮೋಸ, ವಂಚನೆ ಎಲ್ಲವೂ ಇರುತ್ತೆ. ಇದನ್ನು ಮೀರಿ ಬೆಳೆಯುವುದು ಅಂದ್ರೆ ಅದೊಂದು ತಪ್ಪಸ್ಸು. ಇದು ಸಾಧ್ಯವಾಗದೆ ಸುಶಾಂತ ರೀತಿಯ ಒಳ್ಳೆಯ ನಟರು ಸಾವಿಗೆ ಶರಣಾಗ್ತಿದ್ದಾರೆ. ಇದಾಗಬಾರದು ಅಂದ್ರೆ ಸ್ವಜನಪಕ್ಷಪಾತಕ್ಕೆ ಅಂತ್ಯ ಹಾಡಬೇಕಿದೆ. ಇದರ ವಿರುದ್ಧ ವಕೀಲ ಸುಧೀರಕುಮಾರ ಓಜಾ ಸಿದ್ಧರಾಗಿದ್ದಾರೆ. ಮುಂದೇನಾಗುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!