ವಿಜಯಪುರದಲ್ಲಿ ಕಾರು, ನಗದು, ಚಿನ್ನಾಭರಣ ಕಳ್ಳತನ

308

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಮನೆಯ ಹೊರಗಡೆಯಿದ್ದ ಕಾರು ಕಳ್ಳತನ ಮಾಡಲಾಗಿದೆ. ಮಲ್ಲಿಕಾರ್ಜುನ ನಗರದಲ್ಲಿ ಈ ಘಟನೆ ನಡೆದಿದ್ದು, ಗೀತಾ ಮಲ್ಲನಗೌಡ ಬಿರಾದಾರ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ.

ಒಂದು ಲಕ್ಷ ರೂಪಾಯಿ, 120.50 ಗ್ರಾಂ ಚಿನ್ನಾಭರಣ, ಮನೆಯ ಹೊರಗಡೆ ನಿಲ್ಲಿಸಿದ ಕಾರು ಸಹ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!