ಯುಪಿ ಎಲೆಕ್ಷನ್: ಡಿಸಿಎಂ ಸೇರಿ 11 ಸಚಿವರ ಸೋಲು

202

ಪ್ರಜಾಸ್ತ್ರ ಸುದ್ದಿ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಅಧಿಕಾರ ಹಿಡಿಯುತ್ತಿದೆ. ಇದರ ನಡುವೆ ಆಡಳಿತರೂಢ ಪಕ್ಷದ ಡಿಸಿಎಂ ಸೇರಿ 11 ಸಚಿವರು ಸೋಲು ಅನುಭವಿಸಿದ್ದಾರೆ.

ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ ಸೋಲು ಕಂಡಿದ್ದಾರೆ. ಸಚಿವ ಸುರೇಶ್ ರಾಣಾ ಆರ್ ಎಲ್ ಡಿಯ ಅಭ್ಯರ್ಥಿ ಅಶ್ರಪ್ ಅಲಿ ಖಾನ್ ಎದುರು ಸೋತಿದ್ದಾರೆ. ಛತ್ರಪತಿ ಸಿಂಗ್ ಗಂಗ್ವಾರ್ ಎಸ್ಪಿ ಅಭ್ಯರ್ಥಿ ಅತೌರ್ ರಹಮಾನ್ ವಿರುದ್ಧ ಪರಾಜಯಗಳಿಸಿದ್ದಾರೆ.

ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಎಸ್ಪಿ ಕಾಂಡಿಡೇಟ್ ರಾಮ್ ಸಿಂಗ್ ಎದುರು ಸೋಲು, ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಎಸ್ಪಿ ಅಭ್ಯರ್ಥಿ ಅನಿಲ್ ಕುಮಾರ್ ವಿರುದ್ಧ ಸೋಲು, ಆನಂದ್ ಸುರೇಶ್ ಶುಕ್ಲಾ ಎಸ್ಪಿ ಅಭ್ಯರ್ಥಿ ಜೈಪ್ರಕಾಶ್ ಅಂಚಲ್ ಎದುರು ಸೋಲು, ಉಪೇಂದ್ರ ತಿವಾರಿ ಎಸ್ಪಿ ಅಭ್ಯರ್ಥಿ ಸಂಗ್ರಾಮ್ ಸಿಂಗ್ ವಿರುದ್ಧ ಅಪಜಯ, ರಣವೇಂದ್ರ ಸಿಂಗ್ ಧುನ್ನಿ ಎಸ್ಪಿ ಅಭ್ಯರ್ಥಿ ಉಷಾ ಮೌರ್ಯ ಎದುರು ಸೋಲು, ಲಖನ್ ಸಿಂಗ್ ರಜಪೂತ್ ಎಸ್ಪಿ ಅಭ್ಯರ್ಥಿ ಪ್ರದೀಪ್ ಕುಮಾರ್ ಯಾದವ್ ವಿರುದ್ಧ ಸೋಲು, ಎಸ್ಪಿ ಅಭ್ಯರ್ಥಿ ಮಾತಾ ಪ್ರಸಾದ್ ಪಾಂಡೆ ಎದುರು ಸತೀಶ್ ಚಂದ್ರ ದ್ವಿವೇದಿಗೆ ಸೋಲು, ಸಂಗೀತಾ ಬಲವಂತ ಎಸ್ಪಿ ಅಭ್ಯರ್ಥಿ ಜೈ ಕಿಶನ್ ವಿರುದ್ಧ ಸೋಲು ಅನುಭವಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!