ಎಪಿಎಲ್ ಟೂರ್ನಿ: 37 ಬಾಲ್ ಗಳಲ್ಲಿ ಶತಕ ಬಾರಿಸಿದ ಯಶ್

282

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಧಾರವಾಡ: ಅಳ್ನಾವರ ಪ್ರೇಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ 37 ಬಾಲ್ ಗಳಲ್ಲಿ 108 ರನ್ ಬಾರಿಸುವ ಮೂಲಕ ಆದರ್ಶ ಬಿಗ್ ಡ್ಯಾಡಿ ತಂಡದ ಆಟಗಾರ ಯಶ್ ಕಲಾಲ್ ದಾಖಲೆ ನಿರ್ಮಿಸಿದ್ದಾರೆ.

ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಗರಾಜ ಛಬ್ಬಿ ಟ್ರೋಫಿ ಅಳ್ನಾವರ ಪ್ರೀಮಿಯರ್ ಲೀಗ್ ನಲ್ಲಿ ಕಂಬಾರಗಣವಿ ನೈಟ್ ರೈಡರ್ಸ್ ವಿರುದ್ಧ ಕೇವಲ 37 ಬಾಲ್ ನಲ್ಲಿ 108 ರನ್ ಚಚ್ಚಿದರು. ಇವರ ಆಟಕ್ಕೆ ಎದುರು ಬೌಲರ್ ಗಳು ಬಳಲಿ ಬೆಂಡಾದರು.

ಇನ್ನು ಕಳೆದ ಭಾನುವಾರದಿಂದ ಅಳ್ನಾವರ ಪ್ರೀಮಿಯರ್ ಲೀಗ್ ಪ್ರಾರಂಭವಾಗಿದೆ. ಒಟ್ಟು 8 ತಂಡಗಳು ಭಾಗವಹಿಸಿದ್ದು, ತಲಾ 6 ಪಂದ್ಯಗಳನ್ನು ಆಡಲಿವೆ. ಇದುವರೆಗೂ 17 ಪಂದ್ಯಗಳು ನಡೆದಿವೆ.

ಆದರ್ಶ್ ಬಿಗ್ ಡ್ಯಾಡಿ ತಂಡ 10 ಓವರ್ ನಲ್ಲಿ 135 ರನ್ ಬಾರಿಸುವುದರೊಂದಿಗೆ ಅತಿ ಹೆಚ್ಚು ರನ್ ಬಾರಿಸಿದ ತಂಡವಾಗಿ ಹೊರಹೊಮ್ಮಿದೆ. ಶತಕ ಸಿಡಿಸಿದ ಯಶ್ ಕಲಾಲ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಪ.ಪಂ ಸದಸ್ಯ ವಿನಾಯಕ ಕುರಬರ ನಾಗರಾಜ ಛಬ್ಬಿ ಟ್ರೋಫಿ ನೀಡಿ ಗೌರವಿಸಿದರು.




Leave a Reply

Your email address will not be published. Required fields are marked *

error: Content is protected !!