Search

ಲೇ.. ಲೇ.. ರವಿ ಬೋಪಣ್ಣ ಏನೋ ನಿಂದ್ ಹವಾ…

250

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದ ನಟ, ನಿರ್ದೇಶಕ, ನಿರ್ಮಾಪಕ, ಮ್ಯೂಸಿಕ್ ಡೈರೆಕ್ಟರ್ ಅಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ. ಅವರ ನಿರ್ದೇಶನದ ಚಿತ್ರಗಳು ಅಂದರೆ ಸಿನಿ ರಸಿಕರಿಗೆ ಹಬ್ಬವೇ ಸರಿ. ಬಹಳ ವರ್ಷಗಳ ನಂತರ ಅಂತಹದೊಂದು ಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ.

ರವಿಚಂದ್ರನ್ ಅವರ ಈಶ್ವರಿ ಕಂಬೈನ್ಸ್ ಗೆ 50 ವಸಂತಗಳು ತುಂಬಿವೆ. ರವಿ ಬೋಪಣ್ಣ ಸಿನಿಮಾವನ್ನು ಅವರೆ ನಿರ್ದೇಶನ ಮಾಡಿ, ನಿರ್ಮಾಣ ಸಹ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಅನಿಸುತ್ತೆ 7 ನಿಮಿಷಕ್ಕೂ ಅಧಿಕ ಇರುವ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಟ್ರೇಲರ್ ತುಂಬಾ ರಿಚ್ ಆಗಿ ಬಂದಿದೆ. ಸಾಕಷ್ಟು ಕುತೂಹಲ ಮೂಡಿಸುತ್ತೆ. ಟ್ರೇಲರ್ ನೋಡಿದವರೆಲ್ಲ ಲೇ.. ಲೇ.. ರವಿ ಬೋಪಣ್ಣ ಏನೋ ನಿಂದ್ ಹವಾ ಅನ್ನುತ್ತಿದ್ದಾರೆ. ಕಾರಣ ಟ್ರೇಲರ್ ನಲ್ಲಿ ಆಗಾಗ ಬರುವ ಈ ಡೈಲಾಗ್. ಕಾವ್ಯ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ಅವರನ್ನ ಕ್ರೇಜಿಸ್ಟಾರ್ ತಮ್ಮ ಎಂದಿನ ಶೈಲಿಯಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಸುದೀಪ್ ಎಂಟ್ರಿ ತೋರಿಸಲಾಗಿದೆ. 7 ನಿಮಿಷದ ಟ್ರೇಲರ್ ಇದೆಯಾ ಅನ್ನೋದು ನೋಡಿದ ಬಳಿಕವೇ ಗೊತ್ತಾಗುತ್ತೆ. ಅಲ್ಲಿಯ ತನಕ ನೋಡುಗರನ್ನು ಆಚೆ ಇಚೆ ಅಲುಗಾಡದಂತಿದೆ. ಹೀಗಾಗಿ ಮಲ್ಲನ ಅಭಿಮಾನಿಗಳ ಜೊತೆಗೆ ಚಿತ್ರ ಪ್ರೇಮಿಗಳು ರವಿ ಬೋಪಣ್ಣ ಚಿತ್ರವನ್ನು ಎದುರು ನೋಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!