ಸಿಂದಗಿಯಲ್ಲಿ ಕಂಪ್ಯೂಟರ್ ಅಂಗಡಿಗೆ ಕನ್ನ

707

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಕಾಂಪೌಂಡ್ ಗೆ ಹಚ್ಚಿಕೊಂಡಂತೆ ಇರುವ ಬಸವ ಕಂಪ್ಯೂಟರ್ ಡಿಜಿಟಲ್ ಸೇವಾ ಕೇಂದ್ರದಲ್ಲಿ ಕಳ್ಳತನ ನಡೆದಿದೆ. ಅಂಗಡಿಯಲ್ಲಿರುವ ಕಂಪ್ಯೂಟರ್ ಗಳನ್ನ ಕಳ್ಳತನ ಮಾಡಲಾಗಿದೆ.

ಮಂಗಳವಾರ ಮಧ್ಯರಾತ್ರಿ ಈ ಕೃತ್ಯ ನಡೆದಿದ್ದು, 1 ಲ್ಯಾಪ್ ಟಾಪ್, 2 ಸಿಪಿಯು, 1 ಪ್ರಿಂಟರ್, 2 ಸಿಸಿ ಕ್ಯಾಮೆರಾ ಮತ್ತು ಡಿವಿಆರ್, ಆಧಾರ್ ಕಿಟ್ ಹಾಗೂ 8 ಸಾವಿರ ರೂಪಾಯಿ ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಲಾಗಿದೆ. ಇದ್ರಿಂದಾಗಿ ಕಂಪ್ಯೂಟರ್ ನಲ್ಲಿದ್ದ ಸಾಕಷ್ಟು ದಾಖಲೆಗಳು ಕಳ್ಳರ ಪಾಲಾಗಿವೆ.

ಹಿಂಭಾಗದಿಂದ ಕಳ್ಳತನ ಮಾಡಿರುವುದು

ಅಂಗಡಿಯ ಹಿಂಭಾಗದಿಂದ ಕನ್ನ ಹಾಕಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಜಾಗದಲ್ಲಿ ಕೆಲಸ ಮಾಡ್ತಿದ್ದು, ಇದು ಯಾರೋ ಗೊತ್ತಿದ್ದವರು ಮಾಡಿರುವ ಕೆಲಸ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಂಪ್ಯೂಟರ್ ಅಂಗಡಿ ಮಾಲೀಕರಾದ ಸತೀಶ ನಾಕಮನ ಅವರು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!