ಟ್ರ್ಯಾಕ್ಟರ್ ಪಲ್ಟಿ: ಮಹಿಳೆ ಸಾವು

280

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ, ಕೋರವಾರ-ಕೊಂಡಗೂಳಿ ರಸ್ತೆಯ ಹತ್ತಿರ ನಡೆದಿದೆ. ಯಲ್ಲಮ್ಮ ನಡಕೂರ(40) ಮೃತ ದುರ್ದೈವಿ. ಘಟನೆಯಲ್ಲಿ ಕುಲಸುಮಾ ನದಾಫ(48) ಅನ್ನೋ ಮಹಿಳೆ ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್ ಇಂಜಿನ್ ನಲ್ಲಿ ಚಾಲಕ ರಾಚಯ್ಯ ಈರಯ್ಯ ಹಿರೇಮಠ ಎಂಬಾತ, ಯಲ್ಲವ್ವ ಹಾಗೂ ಕುಲಸುಮಾ ಎಂಬುವರನ್ನ ಹತ್ತಿಸಿಕೊಂಡು ವೇಗವಾಗಿ ವಾಹನ ಚಲಾಯಿಸ್ತಿದ್ದನಂತೆ. ಎದುರಿಗೆ ಕೊಂಡಗೂಳಿ ಕಡೆಯಿಂದ ಬರ್ತಿದ್ದ ವಾಹನಕ್ಕೆ ಸೈಡ್ ಕೊಡಲು ರಸ್ತೆಯಿಂದ ಕೆಳಕ್ಕೆ ಟ್ರ್ಯಾಕ್ಟರ್ ಇಳಿಸಿ ದಿಢೀರ್ ಎಂದು ಕಟ್ ಹೊಡೆದು ಮುಂದಕ್ಕೆ ಚಲಾಯಿಸಿದಾಗ ಪಲ್ಟಿಯಾಗಿದೆ.

ಈ ವೇಳೆ ಗಾಯಗೊಂಡವರನ್ನ ಕೋರವಾರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಯಲ್ಲಮ್ಮ ಮೃತಪಟ್ಟಿದ್ದಾಳೆ. ಈ ಸಂಬಂಧ ಟ್ರ್ಯಾಕ್ಟರ್ ಚಾಲಕ ರಾಚಯ್ಯ ಹಿರೇಮಠ ವಿರುದ್ಧ ಮೃತ ಮಹಿಳೆ ಯಲ್ಲಮ್ಮ ಪತಿ ಬೀರಪ್ಪ ನಡಕೂರ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!