ವಿಧಾನ ಪರಿಷತ್ ಫೈಟ್: ಯಾವ ಪಕ್ಷದಿಂದ ಎಷ್ಟು ಸ್ಪರ್ಧಿಗಳು?

196

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್ ಗೆ ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಹೀಗಾಗಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ರಾಜಕೀಯ ಪಕ್ಷಗಳು ಭರ್ಜರಿ ಪೈಪೋಟಿ ನಡೆಸಿವೆ. ಮೇಲ್ಮನೆ ರಾಜಕೀಯದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರು ನಡೆಸಿವೆ.

25 ಸ್ಥಾನಗಳಲ್ಲಿ 14 ಜನ ಕಾಂಗ್ರೆಸ್ಸಿಗರಿದ್ದರು. ಆ ಸ್ಥಾನಗಳನ್ನು ವಾಪಸ್ ಪಡೆಯುವುದರ ಜೊತೆಗೆ ಹೆಚ್ಚಿನ ಸೀಟು ಗೆಲ್ಲಲು ಪ್ಲಾನ್ ಮಾಡಲಾಗುತ್ತಿದೆ. 25 ಕ್ಷೇತ್ರಗಳಿಗೆ 160 ಮಂದಿ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯಿಂದ 20 ಸ್ಥಾನಗಳಿಗೆ ಸ್ಪರ್ಧಿಸಲು ಬಯಸಿದ್ದು ಇಂದು ಅಭ್ಯರ್ಥಿಗಳ ಪಟ್ಟಿ ದೆಹಲಿಗೆ ಹೋಗಲಿದೆ. ಇನ್ನು ಜೆಡಿಎಸ್ 25 ಸ್ಥಾನಗಳಿಗೂ ಸ್ಪರ್ಧಿಸಲು ಸಿದ್ಧತೆ ನಡೆಸಿದೆ.

ನವೆಂಬರ್ 16ರಿಂದ ನಾಮಪತ್ರ ಸಲ್ಲಿಕೆ ಶುರುವಾಗಿ 23ಕ್ಕೆ ಮುಗಿಯಲಿದೆ. ಬಿಜೆಪಿಯಲ್ಲಿ 14 ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ ಎನ್ನಲಾಗುತ್ತಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಬಹುದು.




Leave a Reply

Your email address will not be published. Required fields are marked *

error: Content is protected !!