ಬಾಕಿ ಉಳಿಸಿರುವ ಕ್ಷೇತ್ರಗಳಿಗೆ ಕೊನೆ ಕ್ಷಣದಲ್ಲಿ ಯಾರಿಗೆಲ್ಲ ಟಿಕೆಟ್?

232

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲಿ ರಾಜಕೀಯ ಪಕ್ಷಗಳು ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಯಾರಿಗೆಲ್ಲ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲವಿದೆ.

ಜೆಡಿಎಸ್ ಇನ್ನು 75 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕು. ಕಾಂಗ್ರೆಸ್ 15 ಹಾಗೂ ಬಿಜೆಪಿ 12 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಟಿಕೆಟ್ ವಂಚಿತ ನಾಯಕರು ಪಕ್ಷದಿಂದ ಪಕ್ಷಕ್ಕೆ ಹೋಗುತ್ತಿರುವುದರಿಂದ ಕೊನೆ ಕ್ಷಣದಲ್ಲಿ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಪಕ್ಕಾ ಆಗುತ್ತೆ ಅನ್ನೋ ಪ್ರಶ್ನೆ ಮೂಡಿದೆ.

ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರಿಗೆ ಟಿಕೆಟ್ ನೀಡುತ್ತೆ. ಇಲ್ಲಿ ಶೆಟ್ಟರ್ ಬಿಜೆಪಿಯಿಂದ ಸ್ಪರ್ಧೆ ಬಯಸಿದ್ದರು. ಸಿಎಂ ಸ್ಪರ್ಧಿಸುತ್ತಿರುವ ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಯಾರನ್ನು ಕಣಕ್ಕೆ ಇಳಿಸುತ್ತೆ. ಚುನಾವಣೆಯಿಂದ ಹಿಂದಕ್ಕೆ ಸರೆದಿರುವ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗದಿಂದ ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತೆ, ಕೈ, ಜೆಡಿಎಸ್ ಯಾರನ್ನು ಇಳಿಸುತ್ತೆ ಅನ್ನೋದು.

ಇನ್ನು ವಿಜಯಪುರ ಜಿಲ್ಲೆಯ ನಾಗಠಾಣ ಎಸ್ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ವಿಠ್ಠಲ ಕಟಕಗೊಂಡ, ಜೆಡಿಎಸ್ ನಿಂದ ಹಾಲಿ ಶಾಸಕ ಚೌವ್ಹಾಣ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಗೋವಿಂದ ಕಾರಜೋಳ ಪುತ್ರ ಉಮೇಶ, ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ನಾಯಕ, ಸಂಸದ ರಮೇಶ ಜಿಗಜಿಣಗಿ ನಡುವೆ ಫೈಟ್ ಇದ್ದು ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲವಿದೆ. ಹೀಗೆ ಈ ಮೂರು ಪಕ್ಷಗಳು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಯಾರನ್ನು ಕಣಕ್ಕೆ ಇಳಿಸುತ್ತೆ ಅನ್ನೋದು ಇಂದು ಬಹುತೇಕ ಫೈನಲ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!