ಯೋಗ ಜಾತಿ, ಧರ್ಮ ಮೀರಿದ್ದು: ಪ್ರಧಾನಿ

367

ರಾಂಚಿ: ಜಾರ್ಖಂಡ್ ನ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ ಮಾಡಿದ್ರು. ಕಾರ್ಯಕ್ರಮದಲ್ಲಿ ಜಾರ್ಖಂಡ್ ಸಿಎಂ ರಘುವೀರ್ ದಾಸ್, ಸಚಿವರು, ಬಿಜೆಪಿ ನಾಯಕರು ಹಾಗೂ 40 ಸಾವಿರ ಸಾರ್ವಜನಿಕರೊಂದಿಗದೆ ಪ್ರಧಾನಿ 5ನೇ ವಿಶ್ವ ಯೋಗ ದಿನಾಚರಣೆಯನ್ನ ಆಚರಣೆ ಮಾಡಿದ್ರು.

ಈ ವೇಳೆ ಮಾತ್ನಾಡಿದ ಪ್ರಧಾನಿ ಮೋದಿ, ಯೋಗ ಅನ್ನೋದು ಜಾತಿ, ಧರ್ಮವನ್ನ ಮೀರಿದ್ದು. ಹೀಗಾಗಿ ಯೋಗವನ್ನ ಪ್ರತಿಯೊಬ್ಬರು ಪ್ರೀತಿಸುತ್ತಾರೆ. ಯೋಗ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು ಅಂತಾ ಹೇಳಿದ್ರು.

ಇನ್ನು ವಿಶ್ವದಾದ್ಯಂತ ಯೋಗವನ್ನ ಆಚರಣೆ ಮಾಡ್ತಿರುವ ಎಲ್ಲ ಜನರಿಗೆ ಶುಭಾಶಯ ಕೋರಿದ ಮೋದಿ, ಯೋಗವನ್ನ ಪ್ರಚಾರ ಮಾಡುವಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದು ಅಂತಾ ಹೇಳಿದ್ರು. ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆ ಗಮನಹರಿಸಬೇಕಿದೆ. ಯೋಗದಿಂದ ಇದು ಸಾಧ್ಯವಿದೆ ಅಂತಾ ತಿಳಿಸಿದ್ರು.

ಇಂದು ಭಾರತದ ಪ್ರತಿಯೊಂದು ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ವಿಶ್ವದೆಲ್ಲೆಡೆ ಯೋಗವನ್ನ ಆಚರಣೆ ಮಾಡಲಾಗ್ತಿದೆ. ಈ ಮೂಲಕ ಭಾರತದ ಪುರಾತನ ಯೋಗಕ್ಕೆ ವಿಶ್ವ ಮಾನ್ಯತೆ ನೀಡ್ತಿರೋದು ಖುಷಿಯ ಸಂಗತಿ.


TAG


Leave a Reply

Your email address will not be published. Required fields are marked *

error: Content is protected !!