100ರ ಅಜ್ಜಿ.. ಯೋಗದಲ್ಲಿ ‘ಪದ್ಮಶ್ರೀ’

404

ಇಂದು ವಿಶ್ವ ಯೋಗ ದಿನಾಚರಣೆ. ಹೀಗಾಗಿ ಭಾರತದ ಪುರಾತನ ಯೋಗ ಕಲೆಯನ್ನ ಇಂದು ವಿಶ್ವದೆಲ್ಲೆಡೆ ಆಚರಣೆ ಮಾಡಲಾಗ್ತಿದೆ. ಇವತ್ತು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಯೋಗ ಹೇಳಿಕೊಡಲಾಗ್ತಿದೆ. ಆರೋಗ್ಯಪೂರ್ಣ ಜೀವನ ಹೊಂದಲು ಯೋಗ ಅತ್ಯಂತ ಸಹಕಾರಿಯಾಗಿದೆ. ಇಂಥಾ ಯೋಗದಿಂದ 100 ಅಜ್ಜಿ ಹೇಗೆ ಫಿಟ್ ಆ್ಯಂಡ್ ಫೈನ್ ಆಗಿದ್ದಾಳೆ ನೋಡಿ.

ಇಡೀ ಮೈ ಸುಕ್ಕುಗಟ್ಟಿದ್ರೂ ಈ ಅಜ್ಜಿ ಯೋಗ ಮಾಡಲು ಶುರು ಮಾಡಿದ್ರೆ, 18ರ ಯುವಕ ಯುವತಿಯರು ನಾಚಿಕೊಳ್ಳಬೇಕು. ಈ ಅಜ್ಜಿಗೆ 100 ವರ್ಷ ವಯಸ್ಸು ಅನ್ನೋದು ಜಸ್ಟ್ ನಂಬರ್. ಅಂದ್ಹಾಗೆ ಈ ಹಿರಿಯ ಜೀವದ ಹೆಸರು ಟಾ ಪೋರ್ಚುನ್ ಲಿಂಚ್. ಫ್ರೆಂಚ್ ಮೂಲದ ಅಜ್ಜಿ ಯೋಗ ಟೀಚರ್ ಆಗಿದ್ದಾರೆ.

ಭಾರತದ ಪುರಾತನ ಆರೋಗ್ಯಕಲೆಯಾದ ಯೋಗವನ್ನ ಇವರು ಇಂದಿಗೂ ತಪ್ಪದೆ ಪ್ರತಿದಿನ ಮಾಡ್ತಾರೆ. ಇದಕ್ಕೆ ಕಾರಣ, ಫ್ರೆಂಚ್ ಮೂಲದವರಾದ ಲಿಂಚ್ ಬಾಲ್ಯವನ್ನ ಕಳೆದಿದ್ದು ಭಾರತದಲ್ಲಿ. ಆಗ ಭಾರತದಲ್ಲಿ ಹುಡ್ಗರು ಯೋಗ ಮಾಡುವುದನ್ನ ನೋಡಿದ್ರು. ಹೀಗಾಗಿ ತಾನು ಯೋಗ ಮಾಡಬೇಕು ಅಂದಾಗ, ಆಕೆಯ ಆಂಟಿ ಅದು ಹುಡ್ಗರು ಮಾಡೋದು ಅಂತಾ ಹೇಳಿದ್ರು.

ಬರೀ ಹುಡ್ಗರು ಯಾಕೆ ಯೋಗ ಮಾಡಬೇಕು. ನಾನು ಯೋಗ ಮಾಡ್ತೀನಿ ಅಂತಾ ಹೇಳಿದ ಲಿಂಚ್ ಅಂದಿನಿಂದ ಯೋಗ ಕಲಿಯಲು ಶುರು ಮಾಡಿದ್ರು. ಮುಂದೆ ಯೋಗದಲ್ಲಿ ಸಂಪೂರ್ಣ ಪಾಂಡಿತ್ಯ ಸಾಧಿಸಿದ ಲಿಂಚ್ ಯೋಗ ಟೀಚರ್ ಆದ್ರು. ಯೋಗದಿಂದ ಖುಷಿ ಸಿಗುತ್ತೆ. ನಮ್ಮ ದೇಹ ಹಾಗೂ ಮನಸ್ಸನ್ನ ಸದಾ ಉಲ್ಲಾಸದಿಂದ ಇರಿಸುತ್ತೆ ಅಂತಾ ಹೇಳ್ತಾರೆ ಲಿಂಚ್.

100 ವರ್ಷದ ಅಜ್ಜಿ ನಾಲ್ಕು ಬಾರಿ ಪೃಷ್ಣ ಬದಲಾವಣೆ ಚಿಕಿತ್ಸೆ ಮಾಡಿಸಿಕೊಂಡಿದ್ರೂ, ನಿತ್ಯ ಯೋಗ ಮಾಡುವುದು ಬಿಟ್ಟಿಲ್ಲ. ಈ ವಯಸ್ಸು ನನ್ಗೆ ಏನೂ ಬದಲಾವಣೆ ತಂದಿಲ್ಲ ಅಂತಾರೆ. ಇಂಥಾ ಅಜ್ಜಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.


TAG


Leave a Reply

Your email address will not be published. Required fields are marked *

error: Content is protected !!