ಹುಡುಗಿಯರ ದಂಧೆ ಮಾಡುತ್ತಿದ್ದ ‘ಯುವ’ ನಟ ಬಂಧನ

263

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಅಪರಾಧ ಕೆಲಸಗಳಲ್ಲಿ ಇದೀಗ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಜನರನ್ನು ಮೋಸ ಮಾಡಿ ಹಣ ಸೂಲಿಗೆ ಭರ್ಜರಿಯಾಗಿ ನಡೆಯುತ್ತಿದೆ. ಇಲ್ಲೊಬ್ಬ ನಟ ಮೊಬೈಲ್ ಆಪ್ ಮೂಲಕ ಹುಡುಗಿಯರ ಫೋಟೋ ಬಳಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ. ಆತನ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.

ಲೊಕೆಂಟೋ ಅನ್ನೋ ಆಪ್ ಮೂಲಕ ನಟ ಮುಂಜುನಾಥ್ ಎಂಬಾತ ಆನ್ಲೈನ್ ಮೂಲಕ ಹಾಗೂ ನೇರವಾಗಿ ಭೇಟಿಯಾಗಿ ಗ್ರಾಹಕರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಈ ಸಂಬಂಧ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2019ರಲ್ಲಿ ಮಂಜುನಾಥ್ ನ್ಯೂರಾನ್ ಅನ್ನೋ ಚಿತ್ರದ ಮೂಲಕ ‘ಯುವ’ ಎಂದು ಪರಿಚಯ ಮಾಡಿಕೊಂಡಿದ್ದ. ಇಂತಹ ನಟ ಮುಂದೆ ಹೆಣ್ಣು ಮಕ್ಕಳ ದಂಧೆ ಶುರು ಮಾಡಿದ್ದ. ಲೊಕೆಂಟೋ ಆಪ್ ಮೂಲಕ ಹೆಣ್ಮಕ್ಕಳ ಆಸೆಯನ್ನು ತೋರಿಸಿ ಹಣ ವಸೂಲಿ ಮಾಡುತ್ತಿದ್ದ. ಇದೀಗ ಇತನ 6 ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!