ಆರ್ ಸಿಬಿಗೆ ಸ್ಮೃತಿ ಮಂದಾನಾ

147

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೊದಲ ಮಹಿಳಾ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ಮುಂಬೈನ್ ಹೋಟೆಲ್ ವೊಂದರಲ್ಲಿ ನಡೆದಿದೆ. ಪ್ರಾಂಚೈಸಿಗಳು ತಮ್ಮ ತಂಡಕ್ಕೆ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನಾ ಆರ್ ಸಿಬಿ ಪಾಲಾಗಿದ್ದಾರೆ.

50 ಲಕ್ಷ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂದಾನಾ 3.4 ಕೋಟಿಗೆ ಹರಾಜುಗೊಂಡಿದ್ದಾರೆ. ಈ ಮೂಲಕ ಭಾರೀ ಮೊತ್ತಕ್ಕೆ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಟೀಂ ಇಂಡಿಯಾ ನಾಯಕ ಹರ್ಮನ್ ಪ್ರೀತ್ ಕೌರ್ 1.18 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಆಸೀಸ್ ಸ್ಟಾರ್ ಪ್ಲೇಯರ್ ಅಷ್ಲೇ ಗಾಡ್ರ್ನರ್ 3.2 ಕೋಟಿಗೆ ಗುಜರಾತ್ ಜಯಂಟ್ಸ್ ತಂಡ ಖರೀದಿಸಿತು.

ನ್ಯೂಜಿಲೆಂಡ್ ಆಟಗಾರ್ತಿ ಸೋಫಿಯಾ ಡಿವೇನ್ ಮೂಲ ಬೆಲೆಗೆ ಆರ್ ಸಿಬಿ ತಂಡಕ್ಕೆ ಬಂದಿದ್ದಾರೆ. ಪ್ರತಿ ತಂಡಕ್ಕೆ 12 ಕೋಟಿ ಖರ್ಚು ಮಾಡಲು ಅವಕಾಶವಿದೆ. 15-18 ಆಟಗಾರ್ತಿಯರು ತಂಡದಲ್ಲಿ ಇರಬೇಕು. 6 ವಿದೇಶಿ ಆಟಗಾರ್ತಿಯರಿಗೆ ಅವಕಾಶವಿದೆ.




Leave a Reply

Your email address will not be published. Required fields are marked *

error: Content is protected !!