ಒಂದೇ ಕುಟುಂಬದ ಮೂವರು ಹೆಣ್ಮಕ್ಕಳು ಆತ್ಮಹತ್ಯೆ

204

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಒಂದೇ ಕುಟುಂಬದ ಮೂವರು ಹೆಣ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದುರಂತವೊಂದು ಕೋಟೆನಾಡಿನಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

ಮಂಗೇರ ತಿಪ್ಪಮ್ಮ(70), ಮಕ್ಕಳಾದ ಮಾರಕ್ಕ(55) ಹಾಗೂ ದ್ಯಾಮಕ್ಕ(35) ಮೃತರು ಎಂದು ಗುರುತಿಸಲಾಗಿದೆ. ನೀರಿನಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರ್ಷದ ಹಿಂದೆ ತಿಪ್ಪಮ್ಮನ ಪತಿ ಮೃತಪಟ್ಟಿದ್ದರು. ತಿಂಗಳ ಹಿಂದೆ ಮಗ ಮೃತಪಟ್ಟಿದ್ದ. ಇದರಿಂದ ಮನೆ ನಿರ್ವಹಣೆ ಕಷ್ಟವಾಗಿದ್ದು, ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!