ಹೆಂಡ್ತಿಯಿಂದಲೇ ಬಯಲಾಯ್ತು 4ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ಡೀಲ್

356

ರಾಮನಗರ: ಐಜೂರು ಠಾಣೆ ಪೊಲೀಸ್ರು ಬರೋಬ್ಬರಿ 44 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹನುಮಂತನರಗದ ರಾಯರಬೀದಿಯ ನಿವಾಸಿ ಬರೇಗೌಡ ಎಂಬಾತನ ಮನೆಯಲ್ಲಿ 20 ಕೆಜಿ, ಮಾರಾಟಕ್ಕೆ ಸಾಗಿಸಲಾಗ್ತಿದ್ದ 24 ಕೆಜಿ ಗಾಂಜಾ ಸೇರಿ ಒಟ್ಟು 44 ಕೆಜಿ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಈ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ.

ಗಂಡ ಹೆಂಡ್ತಿ ನಡುವೆ ನಡೆದ ಜಗಳದಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಗಂಡನ ಜೊತೆಗೆ ಜಗಳ ಮಾಡಿಕೊಂಡಿದ್ದ ಹೆಂಡ್ತಿ ಪೊಲೀಸ್ರಿಗೆ ಫೋನ್ ಮಾಡಿ ಗಾಂಜಾ ಡೀಲಿಂಗ್ ಮಾಹಿತಿ ನೀಡಿದ್ದಾಳೆ. ಈ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸ್ರು 44 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಒಂದು ಕೆಜಿಗೆ 10 ಸಾವಿರ ರೂಪಾಯಿಯಂತೆ ಕೊಡಗು, ಕೇರಳ ಹಾಗೂ ಮೈಸೂರಿಗೆ ಮಾರಾಟ ಮಾಡಲಾಗ್ತಿತ್ತು ಅನ್ನೋದು ತಿಳಿದು ಬಂದಿದೆ.

ಒಟ್ಟು 4 ಲಕ್ಷದ 40 ಸಾವಿರ ಮೊತ್ತದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ರಾಮನಗರದಲ್ಲಿ ನಡೆದ ಅತಿ ದೊಡ್ಡ ದಾಳಿಯಾಗಿದೆ. ಈ ಪ್ರಕರಣ ಸಂಬಂಧ ಖರೀದಿಗೆ ಒಂದಿದ್ದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಸೇರಿದಂತೆ ಒಟ್ಟು ನಾಲ್ವರನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!