74ನೇ ಸ್ವಾತಂತ್ರ್ಯೋತ್ಸವ: ಜಿನ್ನಾ ಹೆಸರು ಪ್ರಸ್ತಾಪಿಸಿದ ಮನಗೂಳಿ

590

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಂದು ರಾಷ್ಟ್ರದೆಲ್ಲೆಡೆ 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಅದೆ ರೀತಿ ಪಟ್ಟಣದ ಅಂಬೇಡ್ಕರ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶಾಸಕ ಎಂ.ಸಿ ಮನಗೂಳಿ ಅವರು ಧ್ವಜಾರೋಹಣ ನೆರವೇರಿಸಿದ್ರು.

ಈ ವೇಳೆ ಮಾತ್ನಾಡಿದ ಶಾಸಕರು, ದೇಶವನ್ನ ಸ್ವತಂತ್ರಗೊಳಿಸುವಲ್ಲಿ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ, ಅಂಬೇಡ್ಕರ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರ ಜೊತೆಗೆ ಭಾರತ ಇಬ್ಭಾಗ ಮಾಡಿ ಪ್ರತ್ಯೇಕ ಪಾಕಿಸ್ತಾನ ನಿರ್ಮಾಣಕ್ಕೆ ಕಾರಣರಾದ ಮಹಮ್ಮದ್ ಅಲಿ ಜಿನ್ನಾ ಹೆಸರನ್ನ ಸಹ ಪ್ರಸ್ತಾಪಿಸಿದ್ರು.

ಮುಂದುವರೆದು ಮಾತ್ನಾಡಿದ ಶಾಸಕರು, ಗಾಂಧೀಜಿ ಕನಸು ನನಸು ಮಾಡಲು ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರು ಸೇರಿ ಒಂದಾಗಿ ಕೆಲಸ ಮಾಡಬೇಕಿದೆ ಎಂದರು. ಇನ್ನು ಪಟ್ಟಣದ ಕೆರೆಗೆ ಬಳಗಾನೂರ ಕೆರೆಯಿಂದ ನೀರು ಸಂಪರ್ಕ ಕಲ್ಪಿಸಿ 24 ಗಂಟೆ ನೀರು ಪೂರೈಕೆ, ಒಳಚರಂಡಿ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ 600 ಕೋಟಿ ರೂಪಾಯಿಯ ಕೆಲಸ ಮಾಡಿಸಲಾಗ್ತಿದೆ ಎಂದರು.

ಇನ್ನು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ಪ್ರಾಸ್ತಾವಿಕವಾಗಿ ಮಾತ್ನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಸಹಕರಿಸಿದ ತಾಲೂಕಿನ ಎಲ್ಲ ಜನತೆಗೆ ಧನ್ಯವಾದಗಳನ್ನ ಸಲ್ಲಿಸಿದ್ರು. ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ರ್ಯಾಂಕ್ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಶ್ಲಾಘಿಸಿದ್ರು. ಪಿಯುಸಿ, ಎಸ್ಎಸ್ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕರೋನಾ ವಾರಿಯರ್ಸ್ ಸಿಬ್ಬಂದಿಗೆ ಗೌರವಿಸಿ ಸನ್ಮಾನಿಸಲಾಯ್ತು.

ಈ ವೇಳೆ ಸಿಪಿಐ ಸತೀಶಕುಮಾರ ಕಾಂಬಳೆ, ಪಿಎಸ್ಐ ಸಂಗಮೇಶ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ತಾಲೂಕು ಪಂಚಾಯ್ತಿ ಪ್ರಭಾರಿ ಅಧ್ಯಕ್ಷ ಸಂಜೀವಕುಮಾರ ಎಂಟಮಾನ, ಎಪಿಎಂಸಿ ಅಧ್ಯಕ್ಷ ಗೋಲ್ಲಾಳಪ್ಪ ರೂಗಿ, ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ನಗನೂರ ಸೇರಿದಂತೆ ಅನೇಕರು ಭಾಗವಹಿಸಿದ್ರು. ದೈಹಿಕ ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದ್ರು.




Leave a Reply

Your email address will not be published. Required fields are marked *

error: Content is protected !!