ಪ್ರಜಾಸ್ತ್ರ ಕ್ರೀಡಾ ಸುದ್ದಿ
ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ರಾಜಸ್ಥಾನ್ ರಾಯಲ್ಸ್ ಪರ ಆರ್ ಸಿಬಿ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ತಲುಪಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಟೀಂ, ಕ್ಯಾಪ್ಟನ್ ಸ್ಮಿತ್ 57 ಹಾಗೂ ರಾಬಿನ್ ಉತ್ತಪ್ಪ 41 ರನ್ ಗಳ ಭರ್ಜರಿ ಆಟವಾಡಿದ್ರು. ಸ್ಟೋಕ್ 15, ಸ್ಯಾಮ್ಸನ್ 9, ಬಟ್ಲರ್ 24, ತೇವಾಟಿಯಾ 19 ರನ್ ಹೊಡೆದು ನಾಟ್ ಆಗಿ ಉಳಿದ್ರು. ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.
ಆರ್ ಸಿಬಿ ಪರ ಮಾರಿಸ್ ಮಾರಿಕ ಬೌಲಿಂಗ್ ಮಾಡಿ 4 ಓವರ್ ಗಳಿಗೆ 26 ರನ್ ಕೊಟ್ಟು 4 ವಿಕೆಟ್ ಪಡೆದು ಮಿಂಚಿದ್ರು. ಇನ್ನು ಯಜುವೇಂದ್ರ ಚಹಲ್ 2 ವಿಕೆಟ್ ಪಡೆದ.
ಹೋರಾಟದ ಸ್ಕೋರ್ ಬೆನ್ನು ಹತ್ತಿದ ಕೊಹ್ಲಿ ಪಡೆ 23ಕ್ಕೆ 1 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಕ್ಯಾಪ್ಟನ್ ಕೊಹ್ಲಿ 43 ರನ್ ಬಾರಿಸಿದ್ರು. ಮುಂದೆ ಸಿಡಿದೆದ್ದ ಎಬಿಡಿ ಕೇವಲ 22 ಬೌಲ್ ಗಳಲ್ಲಿ ಬರ್ಜರಿ 6 ಸಿಕ್ಸ್, 1 ಫೋರ್ ಬಾರಿಸಿ 55 ರನ್ ಗಳಿಸಿ ಗೆಲುವಿನ ದಡ ಸೇರಿಸಿ ಅಭಿಮಾನಿಗಳಿಗೆ ಮತ್ತೊಮ್ಮೆ ಕಿಕ್ ನೀಡಿದ.
ಇನ್ನು ಪಿಂಚ್ 14, ಗುರ್ ಕೀರ್ತ ಸಿಂಗ್ 19 ರನ್ ಗಳಿಸಿ ಔಟ್ ಆದ್ರು. 19.4 ಓವರ್ ಗಳಿಗೆ 3 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿ ಗೆಲುವಿನ ಕೇಕೆ ಹಾಕಿದ್ರು. ಆರ್ ಆರ್ ಪರ ಶ್ರೇಯಸ ಗೋಪಾಲ, ತ್ಯಾಗಿ ಹಾಗೂ ತೇವಾಟಿಯಾ ತಲಾ 1 ವಿಕೆಟ್ ಪಡೆದ್ರು.