ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತಿಂಗಳಲ್ಲಿ ಒಂದು ದಿನ ಶಾಲಾ ವಿದ್ಯಾರ್ಥಿಗಳು ಬ್ಯಾಗ್ ರಹಿತವಾಗಿ ಶಾಲೆಗೆ ಬರುವ ಬಗ್ಗೆ ಘೋಷಣೆ ಮಾಡಿದೆ. ಈಗ ಅದರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಒಂದು ಶನಿವಾರ, ಸಂಭ್ರಮ ಶನಿವಾರ ದಿನ ಮಾಡಿ ಬ್ಯಾಗ್ ರಹಿತ ಚಟುವಟಿಕೆಗಳನ್ನು ನಡೆಸಲು ಸೂಚಿಸಿದೆ.
ವಿದ್ಯಾರ್ಥಿಗಳಲ್ಲಿ ನಾಗರೀಕ ಪ್ರಜ್ಞೆ ಸೇರಿದಂತೆ ವಿವಿಧ 10 ವಿಷಯಗಳಿಗೆ ಸಂಬಂಧಿಸಿದಂತೆ ಚಿತ್ರ ಸಹಿತಿ ಪಠ್ಯ ಚಟುವಟಿಕೆಗಳನ್ನು ಶಿಕ್ಷಕರು ತರಗತಿಯಲ್ಲಿ ಕಲಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮಾರ್ಗಸೂಚಿಯನ್ನು DESRT ವೆಬ್ ಸೈಟ್ ಮೂಲಕ ಪಡೆದುಕೊಳ್ಳಲು ತಿಳಿಸಲಾಗಿದೆ.