ಸಂಸತ್ ಭವನ ಎಂಟ್ರಿಗೆ ಕಸರತ್ತು ನಡೆಸಿದವ ಅಂದರ್

334

ನವದೆಹಲಿ: ಇಂದು ಬೆಳಗ್ಗೆ ಬೈಕ್ ಮೇಲೆ ಬಂದ ವ್ಯಕ್ತಿಯೊಬ್ಬ ಸಂಸತ್ ಭವನದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದಾನೆ. ಆದ್ರೆ, ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನ ಅರೆಸ್ಟ್ ಮಾಡಿದ್ದಾರೆ.

ಬಂಧಿತ ವ್ಯಕ್ತಿ ಬಳಿ ಚಾಕು ಪತ್ತೆಯಾಗಿದ್ದು, ಈತ ಯಾವ ಕಾರಣಕ್ಕೆ ಅಕ್ರಮವಾಗಿ ಸಂಸತ್ ಪ್ರವೇಶಕ್ಕೆ ಯತ್ನಿಸಿದ್ದ ಅನ್ನೋದರ ವಿಚಾರಣೆ ನಡೆದಿದೆ. ಈತ ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ರಾಮ ರಹೀಂ ಬೆಂಬಲಿಗ ಅನ್ನೋದು ಕೆಲ ಮೂಲಗಳಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!