ಹುಟ್ಟು ಹಬ್ಬದ ಖುಷಿಯಲ್ಲಿ ತ್ರಿಶಾ

456

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟಾಲಿವುಡ್ ನಟಿ ತ್ರಿಶಾ ಕೃಷ್ಣನ್ 38ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ತ್ರಿಶಾಗೆ ಟಾಲಿವುಡ್ ಸಿನಿ ದಿಗ್ಗಜರು ಸೇರಿದಂತೆ ಸೌಥ್ ಸಿನಿ ಸ್ಟಾರ್ಸ್ ಗಳೆಲ್ಲರೂ ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

1999ರಲ್ಲಿ ಜೋಡಿ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ನಟಿ 2002ರಲ್ಲಿ ಮೌನಂ ಪೆಸಿಯಾದೆ ಮೂವಿಯಲ್ಲಿ ಪೂರ್ಣಪ್ರಮಾಣದ ನಟಿಯಾಗಿ ಕಾಣಿಸಿಕೊಂಡರು. ಅಲ್ಲಿಂದ ಇಲ್ಲಿಯ ತನಕ ಹಲವು ಸೂಪರ್ ಸ್ಟಾರ್ ನಟರೊಂದಿಗೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ.

ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮದೆ ಹೆಸರು ಗಳಿಸಿರುವ ತ್ರಿಶಾ, ಕನ್ನಡದಲ್ಲಿಯೂ ನಟಿಸಿದ್ರು. 2014ರಲ್ಲಿ ಪವರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತರಾಜಕುಮಾರ ಜೊತೆಗೆ ನಟಿಸುವ ಮೂಲಕ ಕನ್ನಡದಲ್ಲಿಯೂ ಕಾಣಿಸಿಕೊಂಡರು.




Leave a Reply

Your email address will not be published. Required fields are marked *

error: Content is protected !!