ಬ್ರೇಕಿಂಗ್ ನ್ಯೂಸ್
Search

ನಟಿ ತ್ರಿಷಾ ಬಗ್ಗೆ ಅಗೌರವ ಹೇಳಿಕೆ, ನಟನ ವಿರುದ್ಧ ಎಫ್ಐಆರ್

135

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ನಟಿ ತ್ರಿಷಾ ಕೃಷನ್ ಬಗ್ಗೆ ಅಗೌರವವಾದ ಹೇಳಿಕೆ ನೀಡಿದ ಪ್ರಕರಣ ಸಂಬಂಧ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ಆಯೋಗ ನೀಡಿದ ದೂರಿನ ಆಧಾರದ ಮೇಲೆ ಚೆನ್ನೈ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಲಿಯೋ ಸಿನಿಮಾದ ವಿಚಾರವಾಗಿ ಟಿವಿಯೊಂದರಲ್ಲಿ ಮಾತನಾಡುವಾಗ ನಟ ಮನ್ಸೂರ್ ಅಲಿ ಖಾನ್ ಆ ಚಿತ್ರದಲ್ಲಿ ನಟಿಸಿದ ತ್ರಿಷಾ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಐಪಿಸಿ ಸೆಕ್ಷನ್ 509 ಬಿ ಸೇರಿ ಇತರೆ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ನಟ ಮನ್ಸೂರ್ ಅಲಿ ಖಾನ್ ಆಡಿದ ಮಾತುಗಳು ತಮಿಳು ಚಿತ್ರರಂಗದ ನಟ, ನಟಿಯರು, ಲಿಯೋ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲವೆಂದು ನಟ ಮನ್ಸೂರ್ ಅಲಿ ಖಾನ್ ಹೇಳಿದ್ದು, ಇದೀಗ ಎಫ್ಐಆರ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!