‘ನಮ್ಮ ಪಕ್ಷದಲ್ಲಿ ಸೋಮನಹಳ್ಳಿ ಮುದುಕಿ ಕಥೆಯಾಗಿದೆ’

176

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭೆ ಚುನಾವಣೆ ಸೋತು ಸುಣ್ಣವಾಗಿರುವ ವಿ.ಸೋಮಣ್ಣ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರ ಹಾಕುತ್ತಿದ್ದಾರೆ. ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿನ ಬೆಳವಣಿಗೆಗಳನ್ನು ನೋಡಿದರೆ ಸೋಮನಹಳ್ಳಿ ಮುದುಕಿ ಕಥೆಯಾಗಿದೆ ಅಂತಾ ವ್ಯಂಗ್ಯವಾಡಿದರು.

ಪಕ್ಷಕ್ಕಾಗಿ ದುಡಿದ ನನಗೆ ಎಷ್ಟು ಹೊಡೆತ ಬಿದ್ದಿದೆ ನನಗೆ ಗೊತ್ತು. ವಿವಿಧ ಪಕ್ಷಗಳೊಂದಿಗೆ ವಿಜಯೇಂದ್ರ, ಆರ್.ಅಶೋಕ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನು ಮಾಜಿ ಶಾಸಕ ಅರವಿಂದ ಲಿಂಬಾವಳಿ ಮಾತಿಗೆ ನನ್ನ ಸಹ ಮತವಿದೆ. ರಾಜಕಾರಣ ಯಾವುದೇ ಮನೆತನಕ್ಕೆ ಸೀಮಿತವಲ್ಲ. ನಾಟಕ ಕಂಪನಿ ಅಲ್ಲ ಅಂತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಹೈಕಮಾಂಡ್ ಸೂಚನೆಯಂತೆ ಕೊಟ್ಟ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡಿದ ನನಗೆ ಯಾವ ರೀತಿಯ ಹೊಡೆತ ಬಿದ್ದಿದೆ ಎನ್ನುವುದನ್ನು ಡಿಸೆಂಬರ್ 6ರ ನಂತರ ತಿಳಿಸುತ್ತೇನೆ ಎನ್ನುವ ಮೂಲಕ ಸ್ವಪಕ್ಷದೊಳಗಿನ ನಡೆಯ ಬಗ್ಗೆ ಕಿಡಿ ಕಾರಿದರು.
Leave a Reply

Your email address will not be published. Required fields are marked *

error: Content is protected !!