‘ತ್ರಿಶಾ, ನನ್ನ ನಡುವೆ ಬೆಡ್ ರೂಂ ಸೀನ್ ಇರುತ್ತೆ ಎಂದುಕೊಂಡಿದ್ದೆ’

94

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ನಟ ಮನ್ಸೂರ್ ಅಲಿ ಖಾನ್, ನಟಿ ತ್ರಿಶಾ ಕೃಷ್ಣನ್ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ವೈರಲ್ ಆಗಿದೆ. ತಳಪತಿ ವಿಜಯ್ ನಟನೆಯ ಲಿಯೋ ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ, ನಟಿ ತ್ರಿಶಾ ಬಗ್ಗೆ ಅಗೌರವದ ಹೇಳಿಕೆ ನೀಡಿದ್ದಾರೆ.

ನಾನು ಸಾಕಷ್ಟು ಸಿನಿಮಾಗಳಲ್ಲಿ ರೇಪ್ ಸೀನ್ ಮಾಡಿದ್ದೇನೆ. ಲಿಯೋ ಚಿತ್ರದ ನಾಯಕಿ ತ್ರಿಶಾ ಎಂದಾಗ ಖುಷಿ ಆಯ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್ ದೃಶ್ಯ ಅಥವ ಬೆಡ್ ದೃಶ್ಯ ಇರುತ್ತೆ ಎಂದುಕೊಂಡಿದ್ದೆ. ಸುಳ್ಳಾಯಿತು. ಲಿಯೋ ಸಿನಿಮಾದವರು ತ್ರಿಶಾ ಮುಖವನ್ನು ನನಗೆ ತೋರಿಸಿಲ್ಲ ಎಂದಿರುವುದು ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದೆ.

ನಟಿ ತ್ರಿಶಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಖಂಡಿಸಿದ್ದಾರೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಗಳನ್ನು ಗಮನಿಸಿದೆ. ಅವರು ನೀಡಿರುವ ಅಗೌರವದ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ನಡುವಳಿಕೆ ಉಳ್ಳವರೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲ. ಮುಂದಿನ ಯಾವುದೇ ಚಿತ್ರದಲ್ಲಿ ಇವರೊಂದಿಗೆ ನಟಿಸುವುದಿಲ್ಲ ಎಂದಿದ್ದಾರೆ.

ನಟಿಯ ಬೆಂಬಲಕ್ಕೆ ಲಿಯೋ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್, ಹಿರಿಯ ನಟಿ, ರಾಜಕಾರಣಿ ಖುಷ್ಬೂ ಸುಂದರ್, ಗಾಯಕಿ ಚಿನ್ಮಯಿ ಪ್ರಸಾದ್ ನಿಂತಿದ್ದಾರೆ. ಚಿತ್ರರಂಗದ ಅನೇಕರು ಇದನ್ನು ಖಂಡಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ನಟಿ ಖುಷ್ಬೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
Leave a Reply

Your email address will not be published. Required fields are marked *

error: Content is protected !!