ನೆಹರು-ಗಾಂಧಿ ಕುಟುಂಬ ಅವಮಾನಿಸಿದ ನಟಿಗೆ ಜಾಮೀನು

380

ಕೋಟಾ: ನೆಹರು ಹಾಗೂ ಗಾಂಧಿ ಕುಟುಂಬವನ್ನ ಸೋಷಿಯಲ್ ಮೀಡಿಯಾದಲ್ಲಿ ಅವಮಾನಿಸಿದ್ದ ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಪಾಯಲ್ ರೋಹ್ಟಿಗೆಗೆ ಬುಂಡಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.

ಸೆಪ್ಟೆಂಬರ್ 6 ಹಾಗೂ 21ರಂದು ನೆಹರು ಹಾಗೂ ಗಾಂಧಿ ಕುಟುಂಬವನ್ನ ಅವಮಾನಿಸುವ ರೀತಿಯ ಪೋಸ್ಟ್ ಗಳನ್ನ ಹಾಕಿದ್ರು. ಮೂತಿಲಾಲ್ ನೆಹರು ಜವಹರಲಾಲ್ ನೆಹರು ಅವರ ತಂದೆಯಲ್ಲ ಎಂದು ಪೋಸ್ಟ್ ಮಾಡಿದ್ರು. ಇದು ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ನಟಿ ಪಾಯಲ್ ವಿರುದ್ಧ ರಾಜಸ್ಥಾನ ಕಾಂಗ್ರೆಸ್ ನ ಯುವ ಪ್ರಧಾನ ಕಾರ್ಯದರ್ಶಿ ಚರ್ಮೇಶ ಶರ್ಮಾ ದೂರು ನೀಡಿದ್ರು.

ಡಿಸೆಂಬರ್ 15 ಭಾನುವಾರ ರಾತ್ರಿ ನಟಿ ಪಾಯಲ್ ಅವರನ್ನ ಬಂಧಿಸಲಾಗಿತ್ತು. ಬಳಿಕ ಬುಂಡಿ ಕೇಂದ್ರ ಕಾರಾಗ್ರಹಕ್ಕೆ ಕಳುಹಿಸಲಾಗಿತ್ತು. ಇಂದು ಇಬ್ಬರು ಭದ್ರತೆ ಹಾಗೂ ತಲಾ 25 ಸಾವಿರ ಬಾಂಡ್ ನೊಂದಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!