ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್ ವುಡ್ ಕಿಚ್ಚ ಸುದೀಪ ಅಭಿನಯದ ದಬಾಂಗ್-3 ಡಿಸೆಂಬರ್ 20ಕ್ಕೆ ರಿಲೀಸ್ ಆಗ್ತಿದೆ. ಕನ್ನಡದಲ್ಲಿಯೂ ಈ ಮೂವಿ ರಿಲೀಸ್ ಆಗ್ತಿದ್ದು, ಪ್ರಮುಖ ಸಿಟಿಯಲ್ಲಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಇಂದು ನಟ ಸಲ್ಲು ಹಾಗೂ ನಿರ್ದೇಶಕ, ನಟ ಪ್ರಭುದೇವ ಬೆಂಗಳೂರಿಗೆ ಬಂದಿದ್ರು.
ದಬಾಂಗ್ 1 ಹಾಗೂ 2 ಚಿತ್ರಗಳು ಸಕ್ಸಸ್ ಆಗಿವೆ. ಇದೀಗ ದಬಾಂಗ್-3 ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಸಿನ್ಮಾ ರಿಲೀಸ್ ಆಗ್ತಿದೆ. ಅದ್ರಲ್ಲೂ ನಟ ಸಲ್ಮಾನ್ ಖಾನ್ ಸ್ವತಃ ತಾವೇ ಕನ್ನಡದಲ್ಲಿಯೇ ಡೈಲಾಗ್ ಹೇಳಿರುವುದು ವಿಶೇಷ. ಇಂದು ಬೆಂಗಳೂರಿಗೆ ಬಂದ ನಟನನ್ನ ನೋಡಲು ಅವರ ಫ್ಯಾನ್ಸ್ ಭರ್ಜರಿಯಾಗಿ ಸೇರಿದ್ರು. ಹೀಗಾಗಿ ಎಲ್ಲೆಡೆ ಸಲ್ಲು ಮೇನಿಯಾ ಸೃಷ್ಟಿಯಾಗಿತ್ತು.