ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ನಟ ರವಿಚಂದ್ರನ್ ಅವರಿಗೆ ಇಂದು 60ರ ಸಂಭ್ರಮ. ಕನ್ನಡ ಸಿನಿ ರಸಿಕರ ಮನಸ್ಸು ಗೆದ್ದಿರುವ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಅವರ ಹೊಸ ಚಿತ್ರ ಕನ್ನಡಿಗ ಟೀಸರ್ ರಿಲೀಸ್ ಮಾಡಲಾಗಿದೆ.
ಬಿ.ಎಮ್ ಗಿರಿರಾಜ ನಿರ್ದೇಶನವಿದೆ. ಎನ್.ಎಸ್ ರಾಜಕುಮಾರ ಅವರ ನಿರ್ಮಾಣ ಮಾಡ್ತಿದ್ದಾರೆ. ರವಿ ಬಸ್ರೂರ ಅವರ ಸಂಗೀತವಿದೆ. ನಟ ರವಿಚಂದ್ರನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಲಿದೆ.