ಪಾಕ್ ನಲ್ಲಿ ಏಷ್ಯಾಕಪ್ ನಡೆದರೆ ಭಾರತ ಹೋಗಲ್ಲ

313

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಏಷ್ಯಾಕಪ್ 2023ರ ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಭಾರತ ಹೋಗುವುದಿಲ್ಲವೆಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಾಕಿಸ್ತಾನದಲ್ಲಿ ನಡೆಸುತ್ತಿದೆ. ಆದರೆ, ಇದರ ಮುಖ್ಯಸ್ಥರು ಆಗಿರುವ ಜಯ್ ಶಾ ಭಾರತ ತಂಡ ಪಾಕ್ ಗೆ ತೆರಳುವುದಿಲ್ಲ ಎಂದಿದ್ದಾರೆ.

91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಪಾಕ್ ಹೊರತು ಪಡಿಸಿ ಬೇರೆ ಯಾವುದೇ ದೇಶದಲ್ಲಿ ಆಡಿಸಿದರೂ ಭಾರತ ಭಾಗವಹಿಸುವುದಾಗಿ ಮನವಿ ಮಾಡಲಾಗಿದೆ. ಶ್ರೀಲಂಕಾದಲ್ಲಿ ನಡೆಸಬೇಕು ಎಂದುಕೊಂಡರೆ ಅಲ್ಲಿನ ಪರಿಸ್ಥಿತಿ ದೃಷ್ಟಿಯಿಂದ ಸ್ಥಳ ಬದಲಾಯಿಸಲಾಗಿದೆ. 2013ರಿಂದ ಭಾರತ ದ್ವಿಪಕ್ಷೀಯ ಸರಣಿ ಇದುವರೆಗೂ ಆಡಿಲ್ಲ.




Leave a Reply

Your email address will not be published. Required fields are marked *

error: Content is protected !!