ಮತ್ತೆ ಲಾಕ್ ಡೌನ್ ಘೋಷಿಸಿದ ಆಸ್ಸಾಂ

303

ಪ್ರಜಾಸ್ತ್ರ ಸುದ್ದಿ

ಗುಹಾಟಿ: ದೇಶದಲ್ಲಿ ಕರೋನಾ ಸೋಂಕು ಹೆಚ್ಚಾಗ್ತಿದ್ದು, ಬಹುತೇಕ ರಾಜ್ಯಗಳು ಮತ್ತೆ ಲಾಕ್ ಡೌನ್ ಜಪ ಮಾಡ್ತಿವೆ. ಹೀಗಿರುವ ಹೊತ್ತಿನಲ್ಲೇ ಆಸ್ಸಾಂ ಸರ್ಕಾರ ಕಮ್ರೂಪ್ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇದರ ಜೊತೆಗೆ ರಾಜ್ಯದಲ್ಲಿ ವೀಕೆಂಡ್ ಟೈಂನಲ್ಲಿ ಲಾಕ್ ಡೌನ್ ಘೋಷಿಸಿದೆ.

ಜೂನ್ 28ರಿಂದ 14 ದಿನಗಳ ಕಾಲ ಕಮ್ರೂಪ್ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದೆ. ಅಲ್ದೇ, ಮುಂದಿನ ಆದೇಶದವರೆಗೆ ನಗರ ಪ್ರದೇಶಗಳಲ್ಲಿ ಶನಿವಾರ ಹಾಗೂ ಭಾನುವಾರ ಲಾಕ್ ಡೌನ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಹಿಂಮಾಶು ಶರ್ಮಾ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಚೆನ್ನೈ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಅನೇಕ ವಾರ್ಡ್ ಗಳನ್ನ ಲಾಕ್ ಡೌನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!